ಕುಶಾಲನಗರ : ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

No comments

ಮಡಿಕೇರಿ :-ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಭಾನುವಾರ ಕುಶಾಲನಗರ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ವಾಹನ ಸಂಖ್ಯೆ ಕೆಎ.45ಎಂ.5216(ಇನ್ನೋವಾ ಕ್ರಿಸ್ತ)ದಲ್ಲಿ ಅಕ್ರಮವಾಗಿ 10.5 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆ 1965ರ ಕಲಂ 11, 14, 32 ಮತ್ತು 38(ಎ) ರಡಿಯಲ್ಲಿ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿಪಡಿಸಿ ಘನ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. 

       ಪ್ರಕರಣದಲ್ಲಿ ಜಪ್ತುಪಡಿಸಲಾದ ವಾಹನ ಮತ್ತು ಮದ್ಯದ ಅಂದಾಜು ಮೌಲ್ಯ ರೂ.22,05,040 ನ್ನು ಇಲಾಖಾ ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನು ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರಾದ ಸಿ.ಲಕ್ಷ್ಮೀಶ ಅವರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಬಕಾರಿ ಹಿರಿಯ ರಕ್ಷಕರಾದ ಕೆ.ಎಸ್.ಉತ್ತಪ್ಪ, ಕೆ.ಎಸ್.ರಾಜು ಮತ್ತು ಅಬಕಾರಿ ರಕ್ಷಕರಾದ ಶಿವಣ್ಣ, ವಾಹನ ಚಾಲಕರಾದ ಸುನೀಲ್ ಕುಶಾಲಪ್ಪ ಇತರರು ಇದ್ದರು.

No comments

Post a Comment