ಸಿದ್ದಾಪುರ : ಆಯುರ್ವೇದ ಔಷಧ ಹಾಗೂ ಚಿಕಿತ್ಸೆಯಲ್ಲಿ ಹೆಸರುವಾಸಿಯಾಗಿ ನೆಲ್ಲಿಹುದಿಕೇರಿಯಲ್ಲಿ ನೂತನ ಶಾಖೆಯ ಹೊಂದಿರುವ ಎಸ್ ಎನ್ ಎ ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಶಾಲಾ ಹಾಗೂ ಚಿಕಿತ್ಸಾ ಕೇಂದ್ರವನ್ನು ಎಸ್ ಎನ್ ಡಿ ಪಿ ಜಿಲ್ಲಾ ಅಧ್ಯಕ್ಷ ವಿ. ಕೆ ಲೋಕೇಶ್ ಉದ್ಘಾಟಿಸಿದರು
.ಜನರು ಆರೋಗ್ಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಆಯುರ್ವೇದ ಔಷಧಿ ಗಳತ್ತ ಹೆಚ್ಚು ಅವಲಂಬಿತರಾಗಿರುವ ಹಿನ್ನಲೆಯಲ್ಲಿ ಇದೀಗ ನೆಲ್ಲಿಹುದಿಕೇರಿಯಲ್ಲಿ ಆಯುರ್ವೇದ ಶಾಲಾ ಪ್ರಾರಂಭವಾಗಿರುವುದು ಈ ಭಾಗದ ಜನರಿಗೆ ಉಪಯುಕ್ತವಾಗಿದೆ ಎಂದರು.
ಉದ್ಘಾಟನಾ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಸಿದ್ಧಾಪುರ ಮಸೀದಿಯ ಖತೀಬ್ ನೌಫಲ್ ಹುದವಿ,ಸಮಾಜ ಸೇವಕ ಮಣಿ ಮೊಹಮ್ಮದ್,ವಿಜಯ್ ಕುಮಾರ್,ಮೋಹನ್ , ಡಾ/ ಎಂ ಕುಮಾರ್,ಡಾ/ ಜಯಕುಮಾರ್ ಸೇರಿದಂತೆ ಮತ್ತಿತರರು ಇದ್ದರು
No comments
Post a Comment