ಮಾಲ್ದಾರೆಯಲ್ಲಿ ಜನಪರ ಲೀಗ್ ಕ್ರಿಕೆಟ್ ಪಂದ್ಯಾಟ .ಸಾಧಕರಿಗೆ ಸನ್ಮಾನ. ವಿಜೇತರಿಗೆ ಬಹುಮಾನ

No comments


ಪ್ಲೇ ಬಾಯ್ಸ್ ತಂಡಕ್ಕೆ ಜನಪರ ಟ್ರೋಫಿ.
ಮಾಲ್ದಾರೆಯಲ್ಲಿ ಲೀಗ್ ಕ್ರಿಕೆಟ್ ಪಂದ್ಯಾಟ.

ಮಾಲ್ದಾರೆ :  ಕನ್ನಡ ರಾಜ್ಯೋತ್ಸವದ ಅಂಗವಾಗಿ ಜನಪರ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಜನಪರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ   ಪ್ಲೇ ಬಾಯ್ಸ್‌  ತಂಡ ಪ್ರಥಮ ಬಹುಮಾನವನ್ನು ತನ್ನದಾಗಿಸಿ ಕೊಂಡು ಗಮನ ಸೆಳೆಯಿತು.
ಮಾಲ್ದಾರೆ ಶಾಲಾ ಸಮೀಪದ ಮೈದಾನದಲ್ಲಿ ನಡೆದ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ 8ತಂಡಗಳು ಭಾಗವಹಿಸಿದ್ದವು ಅಂತಿಮ ಪಂದ್ಯಾಟದಲ್ಲಿ ದ್ವಿತೀಯ ಬಹುಮಾನವನ್ನು ಟೀಮ್ ಗ್ಲೋರಿ ತಂಡ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಗಾಯಕ  ಶಶಿ ಹಾಗು ಸಮಾಜ ಸೇವಕ ಅಲಿ ಅವರನ್ನ ಸಂಘದ ವತಿಯಿಂದ ಸನ್ಮಾನಿಸಲಾಯಿತು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಪ್ರಮುಖರಾದ  ರಘು ಕರುಂಬಯ್ಯ, ವರ್ಗೀಸ್, ಮುನ್ನಾ, ಬಶೀರ್, ಮುಸ್ತಫ,ಇಸ್ಮಾಯಿಲ್,
ಜನಪರ ಸಂಘಟನೆಯ ಅಧ್ಯಕ್ಷ ಆಂಟೋನಿ ,ಸಂಘದ ಪ್ರಮುಖರಾದ   ರಾಜ, ಪ್ರವೀಣ್, ಶೌಕತ್ ಆಲಿ,ಜಸೀರ್,ಬಾವ ಮಾಲ್ದಾರೆ ಸೇರಿದಂತೆ ಮತ್ತಿತರರು ಹಾಜರಿದ್ದರು.

No comments

Post a Comment