ಶಾಲಾರಂಭ ವಿಳಂಬ - ಜಿಲ್ಲಾ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ವಿರೋಧ

No comments

 


ಕೊಡ್ಲಿಪೇಟೆ : ಶಾಲೆಗಳನ್ನು ಆರಂಬಿಸುವ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೆಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ  ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಒಂದರಿಂದ ಎಂಟನೇ ತರಗತಿಯವರೆಗೆ ಈ ವರ್ಷ ಶಾಲೆಗಳನ್ನು ಆರಂಭಿಸದಿರುವ ಸರಕಾರದ ನಿರ್ಧಾರ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಹಾಗೂ ಬಡ ಮಕ್ಕಳ ವಿರೋದಿ ನಿರ್ದಾರವಾಗಿದೆ ಸರ್ಕಾರದ ಈ ನಿರ್ದಾರ ದುರದೃಷ್ಟಕರ .

ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಪೂರಕವಾದ ತಂತ್ರಜ್ಞಾನ ಮತ್ತು ಸೌಲಭ್ಯಗಳು ಇಲ್ಲದ ಕಾರಣ ಸರ್ಕಾರ ಹಾಗೂ ಶಿಕ್ಷಣ ತಙ್ಞರ ಶಿಫಾರಸ್ಸಿನ ಮೇರೆಗೆ ಶಿಕ್ಷಣ ಇಲಾಖೆ ವಿದ್ಯಾಗಮದ ಮೂಲಕ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಸಹ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿತು.ಇದರಲ್ಲಿ ಶಿಕ್ಷಣ ಸಚಿವರ ಶ್ರಮ ಆಪಾರ ಅಭಿನಂದನೀಯ.

ವಿದ್ಯಾಗಮದ ಮೂಲಕ ಸರಕಾರಿ ಶಾಲಾ ಮಕ್ಕಳಿಗೆ ಕರೋನಾ ಕಾಲದಲ್ಲೂ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ಸಫಲವಾಗಿತ್ತು. ಈ ಯೋಜನೆಯಿಂದ ಸರಕಾರಿ ಶಾಲೆಗಳಲ್ಲಿ ದಾಖಾಲಾತಿಯು ಹೆಚ್ಚಳವಾಗಿತ್ತು.  ಇದನ್ನು ಈಗ ನಿಲ್ಲಿಸಲಾಗಿದೆ ಇದರ ಹಿಂದೆ

ಖಾಸಗಿ ಶಾಲೆಗಳ ಹಿತಾಶಕ್ತಿ ಆಡಗಿದೆಯೇ ಎಂಬ ಅನುಮಾನವಿದೆ. ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಮೀರಿ ಹೆಚ್ಚಿನ ಶುಲ್ಕ ಪಡೆದು ಆನ್‌ಲೈನ್ ತರಗತಿ ನಡೆಸುತ್ತಿದೆ.ಕೆಲವು ಶಾಲೆಗಳು ತರಗತಿಯು ನಡೆಸುತ್ತಿದೆ.

ಕೊವಿಡ್ 19 ರ ಪರಿಣಾಮ ವಾಗಿ ಸರಕಾರಿ ಶಾಲೆಯನ್ನು ಮುಚ್ಚಿ ತಿಂಗಳುಗಳೆ ಕಳೆದಿದೆ ಇನ್ನೂ ಶಾಲೆ ಆರಂಬಿಸದ ಬಗ್ಗೆ ನಿರ್ದಾರ ಕ್ಯೆಗೊಳ್ಳದಿರುವುದು ಖಂಡನೀಯವಾಗಿದೆ.

ತಾತ್ಕಾಲಿಕವಾಗಿ ನಿಲ್ಲಿಸಲಾಗಿರುವ ವಿದ್ಯಾಗಮವನ್ನು ಪುನಾರಾಂರಭಿಸಿ ಆದಷ್ಟು ಬೇಗ ಸರಕಾರಿ ಶಾಲೆಯನ್ನು ಆರಂಬಿಸುವ ಬಗ್ಗೆ ಸರಕಾರ ಆದೇಶ ಮಾಡಬೇಕು .

ಕೇವಲ ಶಾಲೆ ತೆರೆಯುವುದರಿಂದ ಕರೋನಾ ಹರಡುವುದಾದರೆ ಸಿನಿಮಾ.ಮಾಲ್‌.ಮಾರುಕಟ್ಟೆ .ಮದುವೇ ಸಮಾರಂಭದಲ್ಲಿ. ಚುನಾವಾಣಾ ಪ್ರಚಾರ ಸಭೆಗಳಲ್ಲಿ.ಜನಸಂದಣಿ ಪ್ರದೇಶಗಳಲ್ಲಿ ಹರಡುವುದಿಲ್ಲವೇ. ಇವೆಲ್ಲವು ತೆರೆದಿರುವಾಗ ಇಲ್ಲಿ ಎಲ್ಲಿಯು ಇಲ್ಲದ ನಿರ್ಬಂದ ಮಕ್ಕಳ ಭವಿಷ್ಯದ ಬುನಾದಿಯಾಗಿರುವ  ಶಾಲೆಗಳಿಗೆ ಮಾತ್ರ ಯಾಕೆ .

ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳೊಂದಿಗೆ ದಿಟ್ಟ  ನಿರ್ದಾರವನ್ನು ಕೈಗೊಂಡು  ಶಾಲೆಗಳನ್ನು ಆರಂಬಿಸಬೇಕು ಇಲ್ಲದಿದ್ದರೆ ಸಮನ್ವಯ ವೇದಿಕೆ ಪೋಷಕರೊಂದಿಗೆ ಸೇರಿ ಪ್ರತಿಭಟಿಸಲಿದ್ದೆವೆ ಎಂದು ಶಾಲಾಭಿವ್ರದ್ದಿ ಮತ್ತು ಮೇಲುಸ್ತುವಾರಿಗಳ ಸಮನ್ವಯ ವೇದಿಕೆಯ ಕೊಡಗು ಜಿಲ್ಲಾದ್ಯಕ್ಷ ಮ್ಯೆಸೂರು ವಿಭಾಗೀಯಾ ಉಸ್ತುವಾರಿ ನಾಗೇಶ್ .ಕೆ.ಎ. ಕೊಡ್ಲಿಪೇಟೆ,

ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ,ಸೋಮವಾರಪೇಟೆ ತಾಲೂಕು ಅದ್ಯಕ್ಷ ಸಿದ್ದಲಿಂಗಪ್ಪ, ಮಡಿಕೇರಿ ತಾಲೂಕು ಅದ್ಯಕ್ಷ ರಾಮಚಂದ್ರಪ್ಪ ,ವಿರಾಜಪೇಟೆ ತಾಲೂಕು  ಅಧ್ಯಕ್ಷ ಅಪ್ರೋಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments

Post a Comment