ಮಡಿಕೇರಿ : SSF ಆಜ್ಹಾದ್ ನಗರ ವಾರ್ಷಿಕ ಕೌನ್ಸಿಲ್ ನೆನ್ನೆ (14/12/2020) ಮಗ್ರಿಬ್ ನಮಾಜ್ಹ್ ಬಳಿಕ ಶಾಖೆ ಅಧ್ಯಕ್ಷರಾದ ಶಬೀರ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನೂರುಲ್ ಹುದಾ ಮದ್ರಸದಲ್ಲಿ ನಡೆಯಲಾಯಿತು,ನಂತರ ಪ್ರಧಾನ ಕಾರ್ಯದರ್ಶಿ ಶಹೀದ್ ಟಿ.ಎ ಸ್ವಾಗತಿಸಿ, ಮುಹಮ್ಮದ್ ಸಖಾಫಿ ಕೆ.ಯು ಉದ್ಘಾಟಿಸಿದರು.ನಂತರ ವರದಿ ಮಂಡನೆ ಕಾರ್ಯದರ್ಶಿ ಮಂಡಿಸಿ,ಲೆಕ್ಕ ಪತ್ರ ಮಂಡನೆ ಕೋಶಾಧಿಕಾರಿ ಮುರ್ಷಿದ್ ಅದನಿ ಮಂಡಿಸಿದರು,ನಂತರ ಅಶಂಸ ಬಾಷಣವನ್ನು ಶಾದುಲಿ ಫೈಝಿ ಉಸ್ತಾದ್ ಹಾಗೂ ಹಂಝ ಸಖಾಫಿ ಉಸ್ತಾದ್ ಮಾಡಿದರು,ಕೌನ್ಸಿಲ್ ಉಸ್ತುವಾರಿಯಾಗಿ ಶಾಹಿದ್ ಹಿಮಮಿ ಚೆರಿಯಪರಂಬು ಹಾಗೂ ಮಜೀದ್ ಕುಂಜಿಲ ಆಗಮಿಸಿದರು, ಶಾಹಿದ್ ಹಿಮಮಿ ಉಸ್ತಾದ್ ತರಗತಿ ನಡೆಸಿಕೊಟ್ಟರು.ಇವರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಯಂತ್ರಿಸಿದರು. ನಂತರ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಯನ್ನು ಬಿಟ್ಟು ಬಾಕಿ ಸಮಿತಿಯನ್ನು ಬದಲಾಯಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಕೌನ್ಸಿಲರ್ ಶಾಫಿ P A,ಡಿವಿಷಣ ನಾಯಕರುಗಳಾದ ಶಿಹಾಬುದ್ದೀನ್ ಕೆ.ಯು,ಸಿನಾನ್ T.H,ಝುಬೈರ್ ಕೆ.ಎಸ್,ಸಲಾವುದ್ದೀನ್ K.H,ಸೆಕ್ಟರ್ ನಾಯಕರಾದ ಬಷೀರ್ ಕೆ.ಎಂ,ತೊಯ್ಯಿಬ್ ಎಂ.ಇ, ಶಾಖೆ ನಾಯಕರು,ಕಾರ್ಯಕರ್ತರು ಉಪಸ್ಥಿತರಿದ್ದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ವಂದಿಸಿ ಮೌಲೂದ್ ನೊಂದಿಗೆ ಮುಕ್ತಾಯಗೊಂಡರು.

No comments
Post a Comment