ಮಡಿಕೇರಿ:ವಿಶ್ವಕಂಡ ಮಹಾವಿದ್ವಾಂಸ ಶಂಸುಲ್ ಉಲಮಾ ಇ.ಕೆ ಅಬೂಬಕರ್ ಮುಸ್ಲಿಯಾರ್ (ಖ ಸಿ) ಇವರ ಅನು ಸ್ಮರಣಾ ಕಾರ್ಯಕ್ರಮವು ಸುಂಟಿಕೊಪ್ಪ ಎಸ್ಎಂಎಸ್ ಅರಬಿಕ್ ಕಾಲೇಜಿನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪಖಾಝಿ ಅಬ್ದುಲ್ಲ ಫೈಝಿ ವಹಿಸಿದ್ದರು.ಶಂಸುಲ್ ಉಲಮಾ ಪ್ರಪಂಚ ಕಂಡ ಅತೀ ಶ್ರೇಷ್ಠ ವಿದ್ವಾಂಸರಾಗಿದ್ದರು. ಆದ್ದರಿಂದಲೇ ಅವರಿಗೆ ಅರಬಿ ಉಲಮಾ ಒಕ್ಕೂಟ ಶಂಸುಲ್ ಉಲಮಾ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು.ಅವರ ಕಾಲದಲ್ಲಿ ಅಥವಾ ಅನಂತರ ಅವರಂತ ಶ್ರೇಷ್ಠ ವಿದ್ವಾಂಸರನ್ನು ಪ್ರಪಂಚ ಕಂಡಿಲ್ಲ ಎಂದು ಖಾಸಿ ಅಭಿಪ್ರಾಯಪಟ್ಟರು. ಅವರ ಆದರ್ಶ ಸಿದ್ಧಾಂತವನ್ನು ಇವತ್ತಿನ ಉಲಮಾಗಳು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಬ್ದುಲ್ಲಾ ಫೈಝಿ ಕರೆ ನೀಡಿದರು. ಸಮಾರಂಭದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ದಾರಿಮಿ ಅಸೋಸಿಯೇಷನ್ ಅಧ್ಯಕ್ಷರಾದ ಸೂಫಿ ದಾರಿಮಿ ವಹಿಸಿದ್ದರು. ಉಸ್ಮಾನ್ ಫೈಜಿ ಸುಂಟಿಕೊಪ್ಪ, ಹಸೈನಾರ್ ಫೈಜಿ ಶನಿವಾರಸಂತೆ, ಇಕ್ಬಾಲ್ ಮೌಲವಿ, ಮಾಹಿನ್ ದಾರಿಮಿ, ಹಮೀದ್ ದಾರಿಮಿ, ಸಿಎಂ ಹಮೀದ್ ಮೌಲವಿ, ಸುಂಟಿಕೊಪ್ಪ ಹಂಸ ಹಾಜಿ ಕುಶಾಲನಗರ, ಹಮೀದ್ ಬೆಟ್ಟಗೇರಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಮ್ ಲೀಕ್ ದಾರಿಮಿ ಸ್ವಾಗತಿಸಿದರು

No comments
Post a Comment