ಕರ್ನಾಟಕ ಮುಸ್ಲಿಂ ಜಮಾಅತ್ ಎಮ್ಮೆಮಾಡು ಬ್ಲಾಕ್ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ತಂಙಳ್ ಆಯ್ಕೆ

No comments

ನಾಪೋಕ್ಲು : ದಿನಾಂಕ: 28.11.2020 ರ ಶನಿವಾರ ದಂದು ಕರ್ನಾಟಕ ಮುಸ್ಲಿಂ ಜಮಾಅತ್ ಮಡಿಕೇರಿ ತಾಲ್ಲೂಕು ಸಮಿತಿ ಸಭೆಯು ಅಯ್ಯೆಂಗೇರಿ ಮದರಸ ಆವರಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಮಡಿಕೇರಿ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಹಾಕತ್ತುರು ರವರು ವಹಿಸಿದರು. ಸಭೆಯಲ್ಲಿ ನೂತನವಾಗಿ ಎಮ್ಮೆಮಾಡು ಬ್ಲಾಕ್ ಸಮಿತಿಯನ್ನು ರಚಿಸಲಾಯಿತು‌.

ಅಧ್ಯಕ್ಷರಾಗಿ ಅಬ್ದುಲ್ ಖಾದರ್ ತಂಗಳ್ ಅಯ್ಯೆಂಗೆರಿ,ಉ ಸಾದುಲಿ ಸಿ ಎಂ ಎಮ್ಮೆಮಾಡು, ಇಸ್ಮಾಹಿಲ್ ಹಾಜಿ ಚೆಟ್ಟಿಮಾನಿ,ಇಬ್ರಾಹಿಂ ಮುಸ್ಲಿಯಾರ್ ಪಡಿಯಾಣಿ, ಕಾರ್ಯದರ್ಶಿಗಳಾಗಿ ಇಬ್ರಾಹಿಂ ಸಹದಿ ಎಮ್ಮೆಮಾಡು, ಹಫೀಲ್ ಎಮ್ಮೆಮಾಡು, ಅಶ್ರಫ್ ತಾವೂರು, ಬಶೀರ್ ಮಾಸ್ಟರ್ ಚೇರಂಬಾಣೆ, ಕೋರ್ಡಿನೇಟರ್ ಆಗಿ ಕೆ. ಎ ಉಸ್ಮಾನ್ ತಾವೂರು, ಕೋಶಾಧಿಕಾರಿಯಾಗಿ ಹಸೈನಾರ್ ಹಾಜಿ ಚೇರಂಬಾಣೆ, ಸದಸ್ಯರುಗಳಾಗಿ ಆದಂಕುನ್ಜಿ ಹಾಜಿ ಪಡಿಯಾಣಿ, ಬಿ. ಹೆಚ್ ಮುಹಮ್ಮದ್ ಅಯ್ಯೆಂಗೆರಿ, ಮೊಯಿದೀನ್ ಕುನ್ನಿ ಅಯ್ಯೆಂಗೆರಿ, ಸುಬೈರ್ ಹಾಜಿ ಪಲ್ಲಿರಾಣೆ, ಸಾದುಲಿ ಪಿ. ಎಂ ಪಡಿಯಾಣಿ, ಅಬ್ಬಾಸ್ ಕೆ. ಪಿ ಎಮ್ಮೆಮಾಡು, ಇಸ್ಮಾಹಿಲ್ ಹೆಚ್. ಎ ಎಮ್ಮೆಮಾಡು, ಮುಹಮ್ಮದ್ ಮುಸ್ಲಿಯಾರ್ ಎಮ್ಮೆಮಾಡು ಆಯ್ಕೆಯಾಗಿದ್ದಾರೆ‌.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಹಫೀಲ್ ಸಹದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಮ್ಮದ್ ಹಾಜಿ ಕುಂಜಿಲ, ಹಾಗೂ ಮಡಿಕೇರಿ ತಾಲ್ಲೂಕು ಸಮಿತಿ ಸದಸ್ಯರಾದ ಇಲ್ಯಾಸ್ ತಂಗಳ್ ಎಮ್ಮೆಮಾಡು ಇವರುಗಳು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯವೈಖರಿ ಬಗ್ಗೆ ಮಾರ್ಗದರ್ಶನವನ್ನು ನೀಡಿ ಅವರವರ ಜವಾಬ್ದಾರಿಯನ್ನು ವಿವರಿಸಿದರು.

ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಮಡಿಕೇರಿ ತಾಲ್ಲೂಕು ಸಮಿತಿಯ ಉಪಾದ್ಯಕ್ಷರಾದ ಅಬೂಬಕರ್ ಸಖಾಫಿ ನೆರವೇರಿಸಿದರು.

ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಮಡಿಕೇರಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅದ್ದು ಹಾಜಿ (ಲಿಮ್ರ ನಾಪೋಕ್ಲು), ಮಡಿಕೇರಿ ತಾಲ್ಲೂಕು ಸಮಿತಿಯ ಕೋರ್ಡಿನೇಟರ್ ಅರಾಫತ್ ನಾಪೋಕ್ಲು, ಸಹಕಾರ್ಯದರ್ಶಿ ಅಹಮದ್  ನಾಪೋಕ್ಲು, ಜಿಲ್ಲಾ ಸಮಿತಿ ಸದಸ್ಯರು, ತಾಲ್ಲೂಕು ಸಮಿತಿ ಸದಸ್ಯರು ಬ್ಲಾಕ್ ಸಮಿತಿ ಸದಸ್ಯರು ದೀನಿ ನೇತಾರರು ಇತರರು ಉಪಸ್ಥಿತರಿದ್ದರು. ಅಹಮದ್  ನಾಪೋಕ್ಲು ಸ್ವಾಗತಿಸಿ ಇಬ್ರಾಹಿಂ ಸಹದಿ ವಂದಿಸಿದರು.

No comments

Post a Comment