ಮಂಗಳೂರು ನಗರದ ಬಿಜೈ ರಸ್ತೆಯ ಗೋಡೆಯೊಂದರಲ್ಲಿ ‘ಲಷ್ಕರ್ ಜಿಂದಾಬಾದ್’ ಎಂದು ಬರೆದಿರುವ ಘಟನೆ ಬೆಳಕಿಗೆ ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಹಜವಾಗಿ ಮುಸ್ಲಿಮರ ತಲೆಗೆ ಕಟ್ಟುವ ಇಂತಹ ಘಟನೆಗಳ ಹಿಂದೆ, ಈ ಹಿಂದೆಯೂ ಅಂತಿಮವಾಗಿ ಬೇರೆಯದ್ದೇ ಕತೆಗಳು ಹೊರಬಿದ್ದಿದ್ದವು. ಕೆಲವು ವರ್ಷಗಳ ಹಿಂದೆ ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲಾಗಿತ್ತು ಆದರೆ, ಬಳಿಕ ಅದು ಶ್ರೀರಾಮ ಸೇನೆಯ ಕಾರ್ಯಕರ್ತರು ಎಸಗಿದ ದುಷ್ಕೃತ್ಯ ಎಂಬುದು ಬಯಲಿಗೆ ಬಂದಿತ್ತು. ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಮುಸ್ಲಿಮರ ಧಾರ್ಮಿಕ ಧ್ವಜವನ್ನು ಹಾರಿಸಿ ಅಲ್ಲಿಯೂ ಮುಸಲ್ಮಾನರ ತಲೆಗೆ ಕಟ್ಟುವ ಪ್ರಯತ್ನ ನಡೆಸಲಾಗಿತ್ತು.ಹೀಗಾಗಿ ಮಂಗಳೂರಿನಲ್ಲಿ ನಡೆದ ಈ ದುಷ್ಕೃತ್ಯದ ಹಿಂದೆ ಇರುವ ದುಷ್ಕರ್ಮಿಗಳನ್ನು ನಿಷ್ಪಕ್ಷಾತವಾಗಿ ತನಿಖೆ ನಡೆಸಿ ಬಯಲಿಗೆಳೆದು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ ಯವರು ಆಗ್ರಹಿಸಿದ್ದಾರೆ.
No comments
Post a Comment