ಸಿದ್ದಾಪುರ :ಇಂಡಿಯನ್ ಸೋಶಿಯಲ್ ಫೋರಮ್ ಅಲ್-ಹಸ್ಸಾ ವಲಯದ ವತಿಯಿಂದ ವಿಜೃಂಭಣೆಯ 65ನೇ ರಾಜ್ಯೋತ್ಸವ ವಿದೇಶದ ದಮಾಮ್ ನಲ್ಲಿ ಆಚರಿಸಲಾಯಿತು.ಅಲ್ ಹಸ್ಸಾ ವಲಯ ಅಧ್ಯಕ್ಷ ಬಶೀರ್ ಮಡಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ಪ್ರತಿಯೊಬ್ಬರು ಸಾಹಿತ್ಯಾಭಿಮಾನ ರೂಢಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅನಿವಾಸಿ ಭಾರತೀಯರ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯ ಬಾತಿಷ್ ಗುರುವಾಯನಕೆರೆ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹಬೀಬ್ ಕಾಟಿಪಳ್ಳ ಇವರ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಅಲ್-ಹಸ್ಸಾ ವಲಯದ ಉಪಾಧ್ಯಕ್ಷ ಶೌಕಾತ್ ಮನಾಲ್, ಪ್ರಧಾನ ಕಾರ್ಯದರ್ಶಿ ಹುಸೈನ್ ಜೋಕಟ್ಟೆ, ಶಾಖೆಯ ಉಪಾಧ್ಯಕ್ಷರು ಮುಖ್ತರ್, ಕಾರ್ಯದರ್ಶಿ ನಾಝಿಮ್ ಶೇಕ್ ಸೇರಿದಂತೆ ವಲಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
No comments
Post a Comment