ಕುಶಾಲನಗರ (Times Of Coorg) : ಸಮಕಾಲೀನ ವಿಷಯಗಳಲ್ಲಿ ದಿಟ್ಟ ನಿಲುವುಗಳೊಂದಿಗೆ ಧಾರ್ಮಿಕ, ಶೈಕ್ಷಣಿಕ, ಕೌಟುಂಬಿಕ ವಿಷಯಗಳನ್ನೊಳಗೊಂಡು"ಸತ್ಯದೆಡೆಗೆ ದಿಟ್ಟ ಹೆಜ್ಜೆ" ಎಂಬ ಶೀರ್ಷಿಕೆಯಡಿಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಸಿಸಿ - ಕೊಡಗು ಸಮಿತಿಯ ಸಾರಥ್ಯದಲ್ಲಿ ಹೊರ ಬರುತ್ತಿರುವ "ಸ್ನೇಹಧಾರ" ನೂತನ ಕನ್ನಡ ಮಾಸ ಪತ್ರಿಕೆಯ ಪ್ರಥಮ ಸಂಚಿಕೆ ಬಿಡುಗಡೆ ಕಾರ್ಯಕ್ರಮ ದಿನಾಂಕ 08-11-2020 ಆದಿತ್ಯವಾರ, ಬೆಳಿಗ್ಗೆ 10 ಘಂಟೆಗೆ ಕುಶಾಲನಗರದ ಕ್ಯಾಸ್ಟಲ್ ಇಂಟರ್ನ್ಯಾಷನಲ್ ಹೋಟೆಲಿನಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಉಸ್ತಾದ್ ಪ್ರಥಮ ಸಂಚಿಕೆಯನ್ನು ಹಾಸನ ಜಿಲ್ಲಾ ಗ್ರಾಹಕರ ವೇದಿಕೆಯ ನ್ಯಾಯಾಧೀಶರಾದ ಲೋಕೇಶ್ ಕುಮಾರ್ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಹೆಚ್. ಎಸ್ ಚಂದ್ರಮೌಳಿ, INTUC ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಯಾಕೂಬ್ ಕೆ ಎ ಹಾಗೂ ಸದಸ್ಯರಾದ ಸಿ ಎಂ ಅಬ್ದುಲ್ ಹಮೀದ್ ಮೌಲವಿ, ಪತ್ರಕರ್ತರಾದ ಇಸ್ಮಾಯಿಲ್ ಕಂಡೇಕೆರೆ ಹಾಗೂ ಎಂ ಇ ಮುಹಮ್ಮದ್, ಪಟ್ಟಣ ಪಂಚಾಯತಿ ಸದಸ್ಯರಾದ ಕಲೀಮುಲ್ಲಾ, ಅಬ್ದುರಹ್ಮಾನ್ ಉಸ್ತಾದ್ ಗೋಣಿಕೊಪ್ಪ, ಇಸ್ಮಾಯಿಲ್ ಉಸ್ತಾದ್, ಉಮರ್ ಫೈಝಿ ಎಡಪಾಲ, ಇಕ್ಬಾಲ್ ಉಸ್ತಾದ್ ನೆಲ್ಲಿಹುದಿಕೇರಿ, ಆರಿಫ್ ಫೈಝಿ, ಬಶೀರ್ ಹಾಜಿ ಪೆರಂಬಾಡಿ ಹಾಗೂ ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಮತ್ತು ಜಿಲ್ಲಾ ಸಮಿತಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಸಮಿತಿ ಹಾಗೂ ಜಿಸಿಸಿ - ಕೊಡಗು ಸಮಿತಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

No comments
Post a Comment