ಪಾರಣೆ ಶಿಥಿಲಾವಸ್ಥೆಯಲ್ಲಿರುವ ಟ್ರಾನ್ಸ್ಫಾರ್ಮರ್ ಬದಲಾಯಿಸಲು ಒತ್ತಾಯ

No comments


ವರದಿ :ಹಾರಿಸ್ ನಾಪೋಕ್ಲು

ನಾಪೋಕ್ಲು (Times Of Coorg) ; ಕೊಣನಂಜಂಗೆರಿ (ಪಾರಾಣೆ) ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲಮುರಿ ಗ್ರಾಮದ ವನಿತಾ  ಎಸ್ಟೇಟ್ ಬಳಿ ಟ್ರಾನ್ಸ್ಫಾರ್ಮರ್ ಮತ್ತು ಅದರ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ  ಇದರ ಸಂಬಂಧ  ಹಲವು ಬಾರಿ ವಿದ್ಯುತ್ ಇಲಾಖೆಗೆ ಮನವಿ ನೀಡಿದ್ದರು.ಇದುವರೆಗೆ ಅಧಿಕಾರಿಗಳು ಸ್ಪಂದಿಸಲಿಲ್ಲ.


ಟ್ರಾನ್ಸ್ಫಾರ್ಮರ್ ತೋಟದ ಮಧ್ಯಭಾಗದಲ್ಲಿ ಇದ್ದು, ಸೂಕ್ತವಾಗಿ ನಿರ್ವಹಣೆ ಇಲ್ಲದೆ ಹಲವು ಬಾರಿ ಬೆಂಕಿ ಸಹ ಹೊತ್ತಿಕೊಂಡ  ಘಟನೆ ನಡೆದು ಕಾಫಿ ಗಿಡಗಳು ಬೆಂಕಿಯಿಂದ ನಾಶವಾಗಿದೆ.

ಈ ತೋಟದಲ್ಲಿ ಕೂಲಿ ಕಾರ್ಮಿಕರು ದಿನನಿತ್ಯ ಕೆಲಸ ಮಾಡುತ್ತಿದ್ದು, ಟ್ರಾನ್ಸ್ಫಾರ್ಮರ್ ಮುರಿದುಬಿದ್ದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಇದೆ.



ಆದ್ದರಿಂದ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಕೂಡಲೇ ಸರಿಪಡಿಸಿ ಇದರಿಂದ ಆಗುವಂತಹ ಅಪಾಯವನ್ನು ತಪ್ಪಿಸ ಬೇಕಾಗಿ ಪಾರಾಣೆ ಯ ಸಾಮಾಜಿಕ ಕಾರ್ಯಕರ್ತ ಬೈರಿಕುಂದಿರ ಮನು ಒತ್ತಾಯಿಸಿದ್ದಾರೆ.





No comments

Post a Comment