151ನೇ ಗಾಂಧಿ ಜಯಂತಿ ಅಂಗವಾಗಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಸಂಘಟನೆ ವತಿಯಿಂದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ ಸಿದ್ದಾಪುರ ಎಸ್ಎನ್ ಡಿ ಪಿ ಸಭಾಂಗಣದಲ್ಲಿ ನಡೆಯಿತು.ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ರಾಚಪ್ಪಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮುಜೀಬ್ ಗಿಡಕ್ಕೆ ನೀರಾಯಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಉಪನ್ಯಾಸಕರಾದಅರ್ಜುನ್.ಹರಿಹರ ,ಶಿಕ್ಷಕ ರಾಜು,ಡಿವೈ ಎಫ್ ಐ ಸಂಘಟನೆಯ ಪ್ರಮುಖರಾದ ಸಾಜು, ಸಾಹಿರ್, ಹಫೀಜ್, ಸುಜಾತಾ, ವಿದ್ಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಹುಮಾನ ವಿತರಣೆ.ಗಾಂಧಿ ಜಯಂತಿ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ 15ಕ್ಕೊ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸುಜಾತಾ ಪ್ರಥಮ, ವಿರಾಜ್ ಪೇಟೆ ಡಿವೈಎಫ್ಐ ಘಟಕ ದ್ವಿತೀಯ, ಸಾಹಿದ್ ಕುಂಜಿಲ ತೃತೀಯ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರುಈ ಸಂದರ್ಭ ಜಿಲ್ಲೆಯ ವಿವಿಧ ಭಾಗದ ಡಿವೈಎಫ್ ಐ ಘಟಕಗಳ ಸದಸ್ಯರುಗಳು ಹಾಜರಿದ್ದರು
ಸಿದ್ದಾಪುರದಲ್ಲಿ ಡಿವೈಎಫ್ಐ ಸಂಘಟನೆಯಿಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ.
ಸಿದ್ದಾಪುರ (Times Of Coorg) :ದುಶ್ಚಟಗಳಿಂದ ದೂರವಿದ್ದು ಸಂಘಟನೆಯಲ್ಲಿ ಶಕ್ತರಾಗಿ ಶಿಕ್ಷಣದಿಂದ ಪ್ರತಿಭಾನ್ವಿತರಾಗಿ ಮಹಾತ್ಮ ಗಾಂಧಿಯ ಆದರ್ಶ ಸಂದೇಶಗಳನ್ನು ಪಾಲಿಸುವ ಮೂಲಕ ಶಾಂತಿ ಸೌಹಾರ್ದತೆಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಯುವ ಸಮೂಹಕ್ಕೆ ಗಣ್ಯರು ಕರೆ ನೀಡಿದರು.
No comments
Post a Comment