ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg.in): ಸಮೀಪದ ಕುಂಜೀಲ ಗ್ರಾಮದ ಹಂಸ ಎಂಬವರ ಮಗಳು ಮುಮ್ತಾಜ್ 20ವರ್ಷ ಎಂಬವಳು ದಿನಾಂಕ 13/10/2020 ರಂದು ಕುಂಜಿಲದ ಮನೆಯಲ್ಲಿ ಮಧ್ಯಾಹ್ನ 2:30 ಸುಮಾರಿಗೆ ವಿಷ ಕುಡಿದು ನರಳಾಡುತ್ತಿರುವದನ್ನು ಗಮನಿಸಿದ ಮನೆಯವರು ತಕ್ಷಣ ವಿರಾಜಪೇಟೆಯ ತಾಲೂಕು ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು, ಪ್ರಯೋಜನವಾಗದೆ ಸಂಜೆ 6:30 ಸುಮಾರಿಗೆ ಕೊನೆಯುಸಿರುಳೆದಿರುತ್ತಾಳೆ.
ಘಟನೆ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೃತಳ ತಾಯಿ ಮಗಳ ಸಾವಿಗೆ ಪುದಿಯರೆ ಆಶ್ರಫ್ ಎಂಬವನು ಕಾರಣ ಎಂದು ಅವನ ವಿರುದ್ಧ ದೂರು ದಾಖಲಿಸಿದ್ದಾರೆ.
ಅಶ್ರಫ್ ಎಂಬವನು ಕಳೆದ ಒಂದುವರೆ ವರ್ಷದಿಂದ ನನ್ನ ಮಗಳನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದು ಅವನ ಕಿರುಕುಳ ತಾಳಲಾರದೆ ವಿಷಪ್ರಾಷನ ಮಾಡಿರುವುದಾಗಿ ಮಗಳು ತಿಳಿಸಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ .
ಘಟನೆ ಸಂಬಂಧ ನಾಪೋಕ್ಲು ಠಾಣಾಧಿಕಾರಿ ಕಿರಣ್ ಆರ್, ಐ ಪಿ ಸಿ ಕಲಂ 306 ರಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

No comments
Post a Comment