ಬಿಜೆಪಿ ಹಿರಿಯ ನಾಯಕ,ದಿ ಪಟ್ಟೆಮನೆ ಶೇಷಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

No comments

ಸಿದ್ದಾಪುರ (Times Of Coorg.in): ನೆಲ್ಯಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬಿಜೆಪಿ ಹಿರಿಯ ನಾಯಕ,ದಿ ಪಟ್ಟೆಮನೆ ಶೇಷಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವು ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ನಡೆಯಿತು.
 ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿ.ಕೆ ಲೋಕೇಶ್ ಮಾತನಾಡಿ ಪಟ್ಟೆಮನೆ ಶೇಷಪ್ಪನವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.ಶೇಷಪ್ಪನವರ ಒಡನಾಟ ಹಲವಾರು ಯುವ ನಾಯಕರುಗಳನ್ನು ಪಕ್ಷಕ್ಕೆ ಪರಿಚಯಿಸಿದೆ,ಅಲ್ಲದೆ ಶೇಷಪ್ಪನವರ ಸಂಘಟನಾ ಚತುರತೆ ಯುವಕರಿಗೆ ಪ್ರೇರಣೆಯಾಗಿದೆ ಎಂದರು. ಈ ಸಂಧರ್ಭದಲ್ಲಿ ನೆಲ್ಯಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬೆಳ್ಳಿಯಪ್ಪ, ಸಹ ಪ್ರಮುಖ್ ಪ್ರಮೋದ್, ಯುವ ಮೋರ್ಚಾ ಅಧ್ಯಕ್ಷ ಸಚಿನ್, ಎಸ್.ಸಿ ಮೋರ್ಚಾ ಅಧ್ಯಕ್ಷ ಮಹೇಂದ್ರ,ಕೃಷಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಪ್ರಮುಖರಾದ ಕಳತಿಲ್ ಸತೀಶ್, ಧರ್ಮ, ಸುಜಾತ, ವಸಂತ್ ಕುಮಾರ್ ಇನ್ನಿತರರು ಹಾಜರಿದ್ದರು.

No comments

Post a Comment