ಸೋಮವಾರಪೇಟೆ (Times Of Coorg): ಶನಿವಾರಸಂತೆ ಹೋಬಳಿಗೆ ಸೇರಿದ ನಂದಿಗುಂದ ಮತ್ತು ಗೊಂದಳ್ಳಿ ಮತ್ತು ಶಾಂತ್ವೇರಿ ಗ್ರಾಮಸ್ಥರಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಮಹಾನಾಯಕ" ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಧಾರವಾಹಿಯ ಫ್ಲೆಕ್ಸ್ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಫ್ಲೆಕ್ಸ್ ಅನಾವರಣ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಧರ್ಮಪ್ಪ ಅವರು ಮಾತನಾಡಿ ಅಂಬೇಡ್ಕರ್ ಅವರು ನಡೆದು ಬಂದ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಜನರಿಗೆ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು. ಮತ್ತು ಶನಿವಾರಸಂತೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಿಲ್ ಭಾಷ ರವರು ಮಾತನಾಡಿ ಅಂಬೇಡ್ಕರ್ ರವರ ವಿಚಾರಗಳನ್ನು ಅರಿತು ಸಂಘಟಕರಾಗಿ ಎಂದು ಕರೆ ಕೊಟ್ಟರು ಮತ್ತು ಶಾಂತ್ವೇರಿ ಸಿದ್ದಪ್ಪ ನವರು ಮಾತನಾಡಿ ಖಾಸಗಿ ವಾಹಿನಿಯಲ್ಲಿ ಮಹಾ ನಾಯಕ ಧಾರಾವಾಹಿ ತಪ್ಪದೆ ವೀಕ್ಷಿಸಿ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು.
. ಈ ವೇದಿಕೆಯ ಕಾರ್ಯಕ್ರಮ ನಿರೂಪಿಸಿದ ಮಾಜಿ ಸೈನಿಕರಾದ ಯತೀಶ್ ಮತ್ತು ಈ ವೇದಿಕೆಯ ಅಧ್ಯಕ್ಷತೆಯನ್ನು ಶಾಂತ್ವೇರಿ ವಿನಯ್ ವಹಿಸಿಕೊಂಡಿದ್ದರು. ಈ ವೇದಿಕೆಯಲ್ಲಿ ಗೌಡಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿನಯ್ ಮತ್ತು ಮಾಜಿ ಅಧ್ಯಕ್ಷರಾದ ಸಿದ್ದಪ್ಪ ನವರು ಮತ್ತು ಮೊಗಪ್ಪ ಮತ್ತು ಮಂಜುನಾಥ್ ಮತ್ತು ಆದಿಲ್ ಪಾಷಾ ಮತ್ತು ಶಿಕ್ಷಕರಾದ ಧರ್ಮಪ್ಪನವರು ಮತ್ತು ಅನಂದ ಕರವೇ ಶನಿವಾರಸಂತೆ ಹೋಬಳಿ ಅಧ್ಯಕ್ಷರು ಮತ್ತು ಧರ್ಮ ಉದ್ಯಮಿ ಮತ್ತು ಪ್ರಾಸಿಸ್ ಡಿಸೋಜ ಕರವೇ ತಾಲ್ಲೂಕು ಅಧ್ಯಕ್ಷರು ಮತ್ತು ಪ್ರಾವಿಣ್ ಕರವೇ ತಾಲ್ಲೂಕು ಕಾರ್ಯದರ್ಶಿ ಇದ್ದರು ಮತ್ತು ನಂದಿಗುಂದ ಮತ್ತು ಗೂಂದಳ್ಳಿ ಮತ್ತು ಶಾಂತ್ವೇರಿ ಗ್ರಾಮಸ್ಥರಾದ ಜಯಂತ. ಮಹೇಶ್. ಯತೀಶ್. ಪ್ರಜ್ವಲ್ ಮತ್ತು ಇನ್ನೂ ಇತರ ಗಣ್ಯರು ಮತ್ತು ಗ್ರಾಮಸ್ಥರ ಭಾಗವಹಿಸಿದ್ದರು.






No comments
Post a Comment