ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದ ಕೊಡಗಿನ ಬಡವರ ಬೆಳಕು ಟ್ರಸ್ಟ್

No comments
ವಿರಾಜಪೇಟೆ : ಕಳೆದ ಹಲವು ವರ್ಷಗಳಿಂದ ಮೂಲಸೌಕರ್ಯ ವಂಚಿತ ವಾಗಿ ವಾಸಿಸಲು ಯೋಗ್ಯವಲ್ಲದ ಪುಟ್ಟ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದೆ  ಸಂಕಷ್ಟಕ್ಕೊಳಗಾಗಿದ್ದ ಗುಂಡಿಗೆರೆ ಗ್ರಾಮದ ವಿಶೇಷಚೇತನ ಕುಟುಂಬವೊಂದಕ್ಕೆ 10 ಲಕ್ಷದ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದ  ಕೊಡಗಿನ ಬಡವರ ಬೆಳಕು ಚಾರಿಟಬಲ್ ಟ್ರಸ್ಟ್ ನ  ಕಾರ್ಯವನ್ನ ಸ್ಥಳೀಯರು ಶ್ಲಾಘಿಸಿದ್ದಾರೆ.ಗುಂಡಿಗೆರೆ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮನೆಯನ್ನು ಎಮ್ಮೆಮಾಡು  ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ ವಿಶೇಷ ಚೇತನ ಕುಟುಂಬಕ್ಕೆ ಕೀ ಹಸ್ತಾಂತರ ಮಾಡಿ ಶುಭ ಹಾರೈಸಿದರು. ಕೊಡಗು ನಾಯಿಬ್ ಖಾಝಿ ಮಹಮೂದ್ ಉಸ್ತಾದ್ ಮನೆ ಹಸ್ತಾಂತರ ಸರಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘಟನೆಗಳು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದು ಹೇಳಿದ ಅವರು ಸಂಕಷ್ಟದ ಜೀವನ ನಡೆಸುತ್ತಿದ್ದ  ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿರುವ ಕೊಡಗಿನ ಬಡವರ ಬೆಳಕು ಎಂಬ ಚಾರಿಟಬಲ್ ಟ್ರಸ್ಟ್ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.ಕೊಡಗು ಜಿಲ್ಲಾ ನಾಯಿಬ್ ಖಾಝಿ ಎಂ ಎಂ ಅಬ್ದುಲ್ಲಾ ಫೈಝಿ ಉಸ್ತಾದ್  ಮಾತನಾಡಿ ವಿಶೇಷಚೇತನ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟು ಮಾನವೀಯತೆ ತೋರಿರುವ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು ಪ್ರತಿಯೊಬ್ಬರೂ ಸೇವಾಮನೋಭಾವ ಮೈಗೂಡಿಸಿಕೊಂಡ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದರು.ಕೊಡಗಿನ ಬಡವರ ಬೆಳಕು ಚಾರಿಟೆಬಲ್ ಟ್ರಸ್ಟ್ ನ ಜಿಲ್ಲಾಧ್ಯಕ್ಷರ ಎಂ. ಎಚ್ ಮಹಮ್ಮದ್ ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್  ಜಾತಿ ಮತ ಭೇದವಿಲ್ಲದೆ ಸಂಕಷ್ಟದಲ್ಲಿರುವವರ ಕುಟುಂಬಗಳಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.ಅನಾರೋಗ್ಯಕ್ಕೆ ಒಳಗಾದ ಕುಟುಂಬಗಳಿಗೆ ಸಹಾಯ. ಪ್ರವಾಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರಿಗೆ ಕಿಟ್ ವಿತರಣೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವಾರು ಸಮಾಜ ಸೇವೆಗಳನ್ನು ನಿರಂತರವಾಗಿ ದಾನಿಗಳ ಸಹಕಾರದಿಂದ ಮಾಡಲಾಗುತ್ತಿದ್ದು ಗುಂಡಿಗೆರೆ ಗ್ರಾಮದ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ ಎಂದರು.ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ ಸಮುದಾಯದಲ್ಲಿ ಸಂಕಷ್ಟಕ್ಕೊಳಗಾಗಿರುವವರ ಕಷ್ಟಗಳಿಗೆ ನೆರವಾಗುವ ಮೂಲಕ ಸಂಘಟನೆಗಳು ಇಂತಹ ಸೇವಾಮನೋಭಾವ ಮೈಗೂಡಿಸಿಕೊಂಡಲ್ಲಿ ಸಮುದಾಯ ಅಭಿವೃದ್ಧಿಯತ್ತ ಸಾಗಲಿದೆ. ಸಾಮಾಜಿಕ ಜಾಲತಾಣಗಳು ದುರುಪಯೋಗವಾಗುತ್ತಿರುವ ಈ ಸಂದರ್ಭದಲ್ಲಿ ಕೊಡಗಿನ ಬಡವರ ಬೆಳಕು ಎಂಬ ಚಾರಿಟೇಬಲ್ ಟ್ರಸ್ಟ್  ವಾಟ್ಸಪ್ ಗ್ರೂಪ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.ಟ್ರಸ್ಟ್  ಕಾರ್ಯದರ್ಶಿ ನೌಶಾದ್ ಜನ್ನತ್ ಮಾತನಾಡಿ ಗುಂಡಿಗೆರೆ ಗ್ರಾಮದ ವಿಶೇಷಚೇತನ ವ್ಯಕ್ತಿಯ ವಾಸವಿದ್ದ ಮನೆಯ ಪರಿಸ್ಥಿತಿ ನೋಡಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಲಾಗಿತ್ತು. ಇದೀಗ ನುಡಿದಂತೆ ನಡೆದು ಕೊಂಡು ಮನೆ ನಿರ್ಮಿಸಿ  ಹಸ್ತಾಂತರ ಮಾಡಲಾಗಿದೆ. ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ತುರ್ತು ಸಂದರ್ಭದಲ್ಲಿ ಜಾತಿ ಮತ ಬೇಧವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಆಂಬುಲೆನ್ಸ್ಸೇವೆ ಮಾಡಲು ಟ್ರಸ್ಟ್  ಮುಂದಾಗಿದೆ ಎಂದರು.ಈ ಸಂದರ್ಭಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ,ಗುಂಡಿಗೆರೆ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್,ವಿರಾಜಪೇಟೆಯ ಉದ್ಯಮಿ ಆಲೀರ ಪವಿಲ್ ,ಬಡವರ ಬೆಳಕು ಟ್ರಸ್ಟ್ ನ ಕಾರ್ಯಾಧ್ಯಕ್ಷ ಸಿ.ಎ ಪತ್ಹಾಹ್  ಕಡಂಗ,ಉಪಾಧ್ಯಕ್ಷ ಬಿ. ಎಂ ಅಶ್ರಫ್
ಸಹಕಾರ್ಯದರ್ಶಿ ಕುವೇಂಡ ಸಫೀಕ್ ಗುಂಡಿಗೆರೆ, ಖಜಾಂಜಿ ಪಿ. ಎ ಮಜೀದ್ , ನಿರ್ದೇಶಕರುಗಳಾದ ನಾಸಿರ್ ಮಕ್ಕಿ ,ಸಿ. ಕೆ ಜಲೀಲ್,ಫಿರ್ದೋಸ್ ಸಂಪಾದಕ ಎಂ.ಇ ಮೊಹಮ್ಮದ್   ಸೇರಿದಂತೆ ಮತ್ತಿತರರುಹಾಜರಿದ್ದರು.

No comments

Post a Comment