ಅನ್ವಾರುಲ್ ಹುದಾ ಸೌದಿ ರಾಷ್ಟೀಯ ಸಮಿತಿ ಅಸ್ತಿತ್ವಕ್ಕೆ

No comments

ಕೊಡಗು ಜಿಲ್ಲೆಯ ಪ್ರತಿಷ್ಠಿತ ಮತ-ಲೌಕಿಕ ಸಮನ್ವಯ ವಿದ್ಯಾಭ್ಯಾಸ ಸಂಸ್ಥೆ ವಿರಾಜಪೇಟೆ ಅನ್ವಾರುಲ್ ಹುದಾ ಸೆಂಟರ್, ಇದರ ಸೌದಿ ಅರೇಬಿಯಾದ ಅನಿವಾಸಿ ಸಮಿತಿಗಳ ಮೇಲ್ಘಟಕವಾಗಿ ಅನ್ವಾರುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು.ಇತ್ತೀಚೆಗೆ ಅನ್ವಾರುಲ್ ಹುದಾ ಪ್ರ. ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್'ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಂಝ ಮುಸ್ಲಿಯಾರ್ ಚೋಕಂಡಳ್ಳಿಯವರು ಅಧ್ಯಕ್ಷರಾಗಿಯೂ ಅಬ್ದುಲ್ ಮಜೀದ್ ಚೇರಂಬಾಣೆ ಪ್ರ. ಕಾರ್ಯದರ್ಶಿ,  ಹಂಝ ಹಾಜಿ ವಿರಾಜಪೇಟೆಯವರು ಕೋಶಾಧಿಕಾರಿ, ಸಂಘಟನಾ ಕಾರ್ಯದರ್ಶಿಯಾಗಿ ಶಂಸುದ್ದೀನ್ ಆಝಾದ್ ನಗರ,  ಹಾಗೂ ಮುಸ್ತಫಾ ಝೈನಿ ಕಂಬಿಬಾಣೆ ಕೋಓರ್ಡಿನೇಟರ್ ಆಗಿರುವ  ರಾಷ್ಟ್ರೀಯ ಸಮಿತಿಯನ್ನು ಸಂಸ್ಥೆಯ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಸಯ್ಯಿದ್ ಶಾಫಿ ಬಾಅಲವೀ ಮದೀನಾ ಮುನವ್ವರರವರು ಅಧಿಕೃತವಾಗಿ ಘೋಷಣೆ ಮಾಡಿದರು.ಸಲಹಾ ಸಮಿತಿ ಚೇರ್ಮನ್ ಆಗಿ ಅಬ್ದುಲ್ ಜಲೀಲ್ ಸಖಾಫಿ ಕಡಂಗ ಹಾಗೂ ಸಲಹಾ ಸದಸ್ಯರಾಗಿ ಸಯ್ಯಿದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ, ಸಯ್ಯಿದ್ ಮುಹಮ್ಮದ್ ರಫೀಖ್ ಮಾಲ್ದಾರೆ, ಯೂಸುಫ್ ಸಅದಿ ಅಯ್ಯಂಗೇರಿ, ಅಬೂಬಕರ್ ಸಅದಿ ಎಮ್ಮೆಮಾಡು, ಮುಹಮ್ಮದ್ ಸಖಾಫಿ ಕೊಟ್ಟಮುಡಿ, ಅಬ್ದುರ್ರಹ್ಮಾನ್ ಹಾಜಿ ಅಯ್ಯಂಗೇರಿ, ಸಿದ್ದೀಕ್ ಝುಹ್ರಿ ಅಯ್ಯಂಗೇರಿ, ಆಬಿದ್ ಕಂಡಕ್ಕರೆ, ಸಲಾಂ ಕುಂಜಿಲ ಆಯ್ಕೆಯಾದರು‌.ಆಬಿದ್ ಝುಹ್ರೀ ಚೇರಂಬಾಣೆ, ಮುಸ್ತಫಾ ಕಡಂಗ, ಶಂಸುದ್ದೀನ್ ಮುಸ್ಲಿಯಾರ್ ಚಾಮಿಯಾಲ, ಅಬ್ದುಸ್ಸಮದ್ ಪೊನ್ನಂಪೇಟೆ ಸಮಿತಿಯ ಉಪಾಧ್ಯಕ್ಷರಾಗಿಯೂ ಸಅದ್ ಮುಸ್ಲಿಯಾರ್ ಕೊಂಡಂಗೇರಿ, ರಿಯಾಝ್ ಚಿಟ್ಟಡೆ, ಆದಂ ಕಂಡಕ್ಕರೆ, ನಿಝಾಂ ಅಂಬಟ್ಟಿ  ಕಾರ್ಯದರ್ಶಿಗಳಾಗಿಯೂ ರಫೀಖ್ ಕೊಳಕೇರಿ ಮಕ್ಕ, ಫಾರೂಖ್ ಮುಸ್ಲಿಯಾರ್ ಮದೀನಾ, ರಫೀಖ್ ನೆಲ್ಯಹುದಿಕೇರಿ ಜಿದ್ದ, ಹಂಝ ಕೊಟ್ಟಮುಡಿ ಯಾಂಬು, ಹಂಝ ಮುಸ್ಲಿಯಾರ್ ಅಲ್ ರಾಸ್, ಮುಸ್ತಫಾ ಬುರೈದ, ರಿಯಾಝ್ ಎಮ್ಮೆಮಾಡು ನಜ್ರಾನ್, ಉಮರ್ ಕುಂಜಿಲ ಅಬ್'ಹಾ, ಬಾರಿಕೆ ಸಲಾಂ ಕುಂಜಿಲ ರಿಯಾದ್, ಸ್ವಾದಿಖ್ ಶನಿವಾರಸಂತೆ ರಿಯಾದ್, ಮುಸ್ತಫಾ ಕೊಮ್ಮೆತ್ತೋಡು ಲಿಝಾನ್, ಹಮೀದ್ ಬೇತ್ರಿ ತಬೂಖ್, ಇಸ್ಹಾಖ್ ಮಿಸ್ಬಾಹಿ ಆಝಾದ್ ನಗರ ದಮ್ಮಾಂ, ಅಬೂಬಕರ್ ಎಮ್ಮೆಮಾಡು ದಮ್ಮಾಂ, ಅಬ್ದುರ್ರಹ್ಮಾನ್ ಕುಂಜಿಲ ಅಲ್ ಹಸ್ಸಾ, ಅಬ್ದುಲ್ ಸಲಾಂ ಪೊಯಕ್ಕರ ಅಲ್ ಹಸ್ಸಾ, ನಸೀರ್ ಗುಂಡಿಕೆರೆ ರಿಯಾದ್ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಮರ್ಕಝುಲ್ ಹಿದಾಯ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದಅಬ್ದುರ್ರಹ್ಮಾನ್ ಹಾಜಿ ಅಯ್ಯಂಗೇರಿ ಹಾಗೂ K S W A ಜಿಸಿಸಿ ಕಾರ್ಯದರ್ಶಿ ಆಬಿದ್ ಕಂಡಕ್ಕರೆ  ಸಭೆಯಲ್ಲಿ ಶುಭಕೋರಿದರು.

No comments

Post a Comment