ನಾಪೋಕ್ಲುವಿನಲ್ಲಿ ಅಕ್ರಮ ಮರಳು ದಂಧೆಗೆ ಮತ್ತೊಬ್ಬ ಬಲಿ

No comments

 

ನಾಪೋಕ್ಲು (Times Of Coorg) : ನಿನ್ನೆ  ದಿನ ದಿನಾಂಕ 27/10/2020 ನಾಪೋಕ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಪಾಲೂರು ಗ್ರಾಮದ  ಕಾವೇರಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಸಂದರ್ಭದಲ್ಲಿ ತೆಪ್ಪ ಮುಳುಗಿ ವಸಂತ ಸುಮಾರು (46)ವರ್ಷ ಎಂಬ ಕಾರ್ಮಿಕ ಸಾವನ್ನಪ್ಪಿದ್ದಾರೆ.

ಎಷ್ಟೇ ಹುಡುಕಾಡಿದರೂ ನಿನ್ನೆ ದಿನ ಪತ್ತೆಯಾಗದ ಮೃತ ದೇಹ ಈ ದಿನ  ಸ್ಥಳೀಯರ ನೆರವಿನೊಂದಿಗೆ  ಹುಡುಕಾಡಿ ಮೃತ ದೇಹ ಪತ್ತೆ ಮರಣೋತ್ತರ ಪರೀಕ್ಷೆಗೆ ಮಡಿಕೇರಿಗೆ ರವಾನಿಸಲಾಗಿದೆ.

ಈ ಸಾವಿಗೆ ಪೊಲೀಸರೇ ಕಾರಣ ಎಂದು ಸ್ಥಳೀಯರ ಆರೋಪಿಸಿದ್ದಾರೆ.ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾದ ಪೊಲೀಸರು ಹಣದಾಸೆಗೆ  ದಂದೆಕೋರರ ಜೊತೆ ಶಾಮೀಲಾಗಿ ಅಕ್ರಮ ದಂದೆ ವಿರುದ್ಧ ಹೋರಾಟ ಮಾಡುವ ವ್ಯಕ್ತಿಗಳ ವಿರುದ್ಧ ಸುಳ್ಳು ದೂರು ದಾಖಲಿಸಿ,ಹೋರಾಟ ಬಗ್ಗುಬಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ವಸಂತ ಅರಕಲಗೂಡು ನಿವಾಸಿ ನಾಪೋಕ್ಲುವೀನಲ್ಲಿ ಪತ್ನಿ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಹಲವು ವರ್ಷಗಳಿಂದ ಕೂಲಿ ಕಾರ್ಮಿಕನಾಗಿ ಮರಳು  ಕೆಲಸ ಮಾಡಿ ಸಂಸಾರ ನಡೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.

No comments

Post a Comment