ಸಿದ್ದಾಪುರದಲ್ಲಿ ಈದ್ ಮಿಲಾದ್ ಆಚರಣೆ.ಗಮನ ಸೆಳೆದ ಬುರ್ದಾ ಮಜ್ಲಿಸ್
ಸಿದ್ದಾಪುರ : ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1495 ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಈದ್ ಮಿಲಾದ್ ವಿವಿಧ ದಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಳವಾಗಿ ನಡೆಯಿತು. ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಮುಸ್ಲಿಂ ಜಮಾಹತ್ ಅಧ್ಯಕ್ಷ ಮುಸ್ತಫಾ ಹಾಜಿ ಮದರಸ ವಿದ್ಯಾರ್ಥಿಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಮದ್ರಸ ವಿದ್ಯಾರ್ಥಿಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಬುರ್ದಾ ಮಜ್ಲಿಸ್ ಗಮನ ಸೆಳೆಯಿತು.ಈ ಸಂದರ್ಭ ಸಿದ್ದಾಪುರ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಇಸ್ಮಾಯಿಲ್,ಕಾರ್ಯದರ್ಶಿ ರವೂಫ್ ಹಾಜಿ,ಸಮಿತಿಯ ಪ್ರಮುಖರಾದ ಅಸ್ಕರ್, ಕರೀಂ,ಸಮೀರ್,ನಜೀರ್,ಮದರಸ ಮುಖ್ಯಾಧ್ಯಾಪಕ ಆರಿಫ್ ಫೈಝಿ,ಅಧ್ಯಾಪಕರುಗಳಾದ ಹನೀಪ್, ಮೋಹಿದೀನ್, ಯುಸೂಪ್,ಕರೀಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
No comments
Post a Comment