SSF ಮಡಿಕೇರಿ ಡಿವಿಷನ್ ಸಮಿತಿ ವತಿಯಿಂದ ನಡೆದ VITALIZE ಕ್ಯಾಂಪ್ ಯಶಸ್ವಿ

No comments


ಸೋ.ಪೇಟೆ (Times Of Coorg) : SSF ಮಡಿಕೇರಿ ಡಿವಿಷನ್ ಸಮಿತಿಯು ಆಯೋಜಿಸಿದ VITALIZE ಸೆಕ್ಟರ್ ಹಾಗು ಯೂನಿಟ್ ನಾಯಕರ ಕ್ಯಾಂಪ್ ಯಶಸ್ವಿಯಾಗಿ ನಿನ್ನೆ ದಿನಾಂಕ 16/09/2020 ಬುಧವಾರ ಮಗ್ರಿಬ್ ನಮಾಝ್ ಬಳಿಕ ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆಯಿತು, ಸಂಜೆ ಮರ್ಹೂಂ ರಫೀಕ್ ಸಖಾಫಿ ಉಸ್ತಾದರ ಖಬರ್ ಝಿಯಾರತ್ ನೊಂದೀಗೆ ಕಾರ್ಯಕ್ರಮಕ್ಕೆ ಅಧಿಕ್ರತ ಚಾಲನೆ ನೀಡಿ ಮಗ್ರಿಬ್ ನಮಾಝ್ ಬಳಿಕ ಸೂರತುಲ್ ವಾಕಿಯ ಹಾಗು ಮುಲ್ಕ್ ನೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಡಿವಿಷನ್ ಅಧ್ಯಕ್ಷರಾದ ಅಸ್ಕರ್ ಸಖಾಫಿ ಉಸ್ತಾದ್ ಅಧ್ಯಕ್ಷತೆಯನ್ನು ವಹಿಸಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಕುಂಜಿಲ ಸರ್ವರನ್ನು ಸ್ವಾಗತಿಸಿದರು.

ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷರಾದ ಅಬ್ದುಲ್ ಕರೀಂ ಫಾಳಿಲಿ ಉಸ್ತಾದ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಹಾಗು ರಾಜ್ಯ ನಾಯಕರಾದ ಮುಬಷಿರ್ ಅಹ್ಸನಿ ಉಸ್ತಾದ್ ಕೊಂಡಂಗೇರಿ ಶುಭಹಾರೈಸಿದರು,SYS ಇಸಾಬಾ ರಾಜ್ಯ ಡೈರೆಕ್ಟರ್ ಉಮ್ಮರ್ ಸಖಾಫಿ ಉಸ್ತಾದ್ ಬಹಳ ಪರಿಣಾಮಕಾರಿಯಾಗಿ ತರಗತಿ ನಡೆಸಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಡಿವಿಷನ್ ಉಪಾಧ್ಯಕ್ಷರು ಹಾಗು ಇವೆಂಟ್ ಕಾರ್ಯದರ್ಶಿ ಮೂಸ ಅಮಾನಿ ಉಸ್ತಾದ್ ಕೊಂಡಂಗೇರಿ ನಿರ್ವಶಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ,ಜಿಲ್ಲಾ Q-TEAM ಕಂಟ್ರೋಲರ್ ರಫೀಕ್ ಲತೀಫಿ ನಾಪೋಕ್ಲು, ಜಿಲ್ಲಾ ನಾಯಕರಾದ ಶೌಕತ್ ಎಮ್ಮೆಮಾಡು,ಹಸೈನಾರ್ ಸಾದಾತ್ ನಗರ್ ಪ್ರಮುಖರಾದ ಶಾಫಿ ಆಝದ್ ನಗರ್,ಸಿನಾನ್ ಆಝದ್ ನಗರ್,ಜಿಲ್ಲಾ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಲ್ಲಾ ಕೊಳಕೇರಿ ಮುಂತಾದ ನಾಯರು ಉಪಸ್ಥಿತರಿದ್ದರು,ಕಾರ್ಕ್ರಮದ ಕೊನೆಯಲ್ಲಿ ನಮ್ಮಿಂದ ಅಗಲಿದವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ನಡೆಸಿ ದುಆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಿವಿಷನ್ Q-TEAM ಕಾರ್ಯದರ್ಶಿ ಶಾಫಿ ವಂದಿಸಿ ಮೂರೂ ಸ್ವಲಾತ್ ನೊಂದಿಗೆ ವಿಸರ್ಜಿಸಲಾಯಿತು.
ಕಾರ್ಯಕ್ರಮದಲ್ಲಿ *SSF ಮಡಿಕೇರಿ ಡಿವಿಷನ್ facebook ಪೇಜ್ facebook.com/ssfmadikeridivision* ಅಧಿಕ್ರತವಾಗಿ ಬಿಡುಗತೆ ಗೊಳಿಸಲಾಯಿತು.







No comments

Post a Comment