ವಿರಾಜಪೇಟೆ (Times Of Coorg) : ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿಯ ಸಭೆಯಲ್ಲಿ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಮೊಯಿನುದ್ದೀನ್ ಅವರನ್ನು ಆಯ್ಕೆ ಮಾಡಲಾಯಿತು.
ಎಮ್ಮೆಮಾಡಿನ ಕಿಲ್ಲೂರು ತಂಗಳ್ ಅವರ ಅಧ್ಯಕ್ಷತೆಯಲ್ಲಿ ಅನ್ವಾರ್ ಕ್ಯಾಂಪಸ್ನಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಖಾಲಿದ್ ಫೈಜಿ .ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಸಖಾಫಿ,ಸಹ ಕಾರ್ಯದರ್ಶಿ ಮಜೀದ್ ಚೊಕ್ಕಂಡಹಳ್ಳಿ ಸೇರಿದಂತೆ ತಾಲ್ಲೂಕಿನ ವಿವಿಧ ಮಹಲ್ ಗಳ ಸಮಿತಿಯ 50 ಮಂದಿಯನ್ನು ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭ ಜಿಲ್ಲಾ ನಾಹಿಬ್ ಖಾಝಿ ಮಹಮೂದ್ ಉಸ್ತಾದ್ , ,ಕೊಂಡಂಗೇರಿ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಯೂಸೂಫ್ ಸೇರಿದಂತೆ ಮತ್ತಿತರರು ಉಪಸಿತರಿದ್ದರು.
No comments
Post a Comment