ಕೊಡ್ಲಿಪೇಟೆ : ಜನ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ದ ಜನ ಜಾಗೃತಿ ಜಾಥ
ವರದಿ : ಹನೀಪ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನ ಜಾಗ್ರತಿ ಜಾಥ ಮಂಗಳವಾರ ಕೊಡ್ಲಿಪೇಟೆಗೆ ಆಗಮಿಸಿತು.
ದಲಿತ ಮತ್ತು ಪ್ರಗತಿಪರ ಸಂಘಟನೆಯ ಮುಖಂಡರುಗಳು
ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಜಾಥವನ್ನು ಬರಮಾಡಿಕೊಂಡರು,
ಸುಗ್ರೀವಾಙ್ಞೆಗಳ ಮೂಲಕ ಜನ ವಿರೋದಿ ಭೂಮಿ ಮತ್ತು ಕಾರ್ಮಿಕ ಕಾಯ್ದೆಯನ್ನು ಸರ್ಕಾರ ಜಾರಿ ಮಾಡುತ್ತಿರುವುದನ್ನು ಖಂಡಿಸಿ ಮತ್ತು
ಬಡರ‌್ಯೆತ .ದಲಿತ.ಅದಿವಾಸಿ.ಅಲೆಮಾರಿ.ಅರಣ್ಯವಾಸಿಗಳ ಹಲವು ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಇದೇ ತಿಂಗಳು 21 ರಂದು ಬೆಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಜೋತೆಗೂಡಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವದಿ ಸತ್ಯಾಗ್ರಹದ ಪ್ರಚಾರ ಹಾಗೂ ಸರ್ಕಾರದ ಜನ ವಿರೋದಿ ಕಾಯ್ದೆಗಳ ಬಗ್ಗೆ ಜನ ಜಾಗ್ರತಿ ಮೂಡಿಸಲು ಈ ಜಾಥ ವನ್ನು ಹಮ್ಮಿಕೊಳ್ಳಲಾಗಿದೆ
ಉಳುವವನೆ ಭೂ ಓಡೆಯ ಎಂದು ಘೋಷಿಸಿದ ಬಡವರ ಭೂ ಸೂಧರಣೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ರವರ ಸಮಾಧಿಯಿಂದ ಆರಂಬಿಸಿದ ಈ ಜಾಗ್ರತಿ ಜಾಥ ರಾಜ್ಯಾದ್ಯಂತ ಮೂರು ತಂಡಗಳಾಗಿ ಸಂಚರಿಸುತ್ತಿದೆ ಎಂದು ಜಾಥ ನಾಯಕತ್ವ ವಹಿಸಿರುವ ಭೂಮಿ ವಸತಿ ಹಕ್ಕು ಸಮಿತಿಯ ಕೇಂದ್ರ ಸಮೀತಿ ಸದಸ್ಯರುಗಳಾದ
ಡಿ.ಎಸ್.ನಿರ್ವಾಣಪ್ಪ .
ಶ್ರಿನಿವಾಸ್ ಕಂದಗಾಲ.
ಕುಮಾರ ಸಮತಾಳ . ತಿಳಿಸಿದರು,
ದಲಿತ ಹಿತ ರಕ್ಷಣಾ ಓಕ್ಕೂಟದ ತಾಲೂಕು ಅದ್ಯಕ್ಷ ವಸಂತ್ ಸ್ವಾಗತಿಸಿ,
ತಾಲೂಕು ಸಮಿತಿ ಸದಸ್ಯ ವೇದ್‌ಕುಮಾರ್ ನಿರೂಪಿಸಿ ವಂದಿಸಿದರು,
ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ
ಜಗದೀಶ್ , ಕೆಂಚೆಶ್ವರ, ವಿಜಯ, ಧರ್ಮ ಕಲ್ಲಳ್ಳಿ , ಅಭಿ, ಕೇಶವ , ಆಟೋ ಶೌಕತ್ , ಸೇರಿದಂತೆ ಹಲವರು ಭಾಗವಹಿಸಿದರು ,


No comments
Post a Comment