ಕೊಡಗು ಜಿಲ್ಲೆಯಲ್ಲಿ ಇಂದು 31 ಮಂದಿಗೆ ಕೊರೋನಾ ಪಾಸಿಟಿವ್ / 1 ಸೆಪ್ಟೆಂಬರ್ 2020 ಮಂಗಳವಾರ
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 25 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 6 ಹೊಸ ಕೋವಿಡ್-19 ಪ್ರಕರಣಗಳು ಸೇರಿದಂತೆ ಒಟ್ಟು 31 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿಯ ಅರೆಕಾಡು ಹೊಸ್ಕೇರಿ ಗ್ರಾಮದ ಚಿಲಿಪಿಲಿ ಎಸ್ಟೇಟ್ ಬಳಿಯ 46 ಮತ್ತು 56 ವರ್ಷದ ಮಹಿಳೆ. ತಾವೂರು ಚಂದ್ರಗಿರಿ ಎಸ್ಟೇಟ್‍ನ 29 ವರ್ಷದ ಪುರುಷ, 24 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ನ್ಯೂ ಎಕ್ಸ್‍ಟೆನ್ಷನ್ನಿನ ಪ್ರಸನ್ನ ಗಣಪತಿ ದೇವಾಲಯ ಸಮೀಪದ 46 ವರ್ಷದ ಪುರುಷ. ಮಡಿಕೇರಿ ಪಿಡಬ್ಲ್ಯೂಡಿ ವಸತಿಗೃಹದ ಮುಳಿಯ ಬಸ್ ನಿಲ್ದಾಣದ ಮುಂದಿನ 33 ವರ್ಷದ ಪುರುಷ. ಮಡಿಕೇರಿ ಕಾವೇರಿ ಹಾಲ್ ಬಳಿಯ ಪ್ರಕೃತಿ ನಗರದ 58 ವರ್ಷದ ಪುರುಷ. ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೋಲೀಸ್ ವಸತಿಗೃಹದ 36 ವರ್ಷದ ಪುರುಷ. ಮಡಿಕೇರಿ ಕುಂಜಿಲದ ಮಸೀದಿ ಬಳಿಯ 49 ವರ್ಷದ ಪುರುಷ. ಕುಶಾಲನಗರದ ಎಂಜಿನಿಯರಿಂಗ್ ಹಾಸ್ಟೆಲ್ ಬಳಿಯ ಬಸವೇಶ್ವರ ಬಡಾವಣೆಯ 2ನೇ ಬ್ಲಾಕಿನ 42 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ. ಮಡಿಕೇರಿ ತ್ಯಾಗರಾಜ ಕಾಲೋನಿಯ 60 ವರ್ಷದ ಪುರುಷ, 22 ವರ್ಷದ ಮಹಿಳೆ, 8 ವರ್ಷದ ಬಾಲಕ ಮತ್ತು 7 ವರ್ಷದ ಬಾಲಕಿ. ಸೋಮವಾರಪೇಟೆ ಕುಸ್ಬೂರು ಅಂಚೆಯ ಬೇಲೂರುಬಾಣೆಯಲ್ಲಿನ 43 ವರ್ಷದ ಪುರುಷ ಮತ್ತು 17 ವರ್ಷದ ಬಾಲಕ. ಮಡಿಕೇರಿ ಕರ್ಣಂಗೇರಿಯ ನಿಸರ್ಗ ಬಡಾವಣೆಯ 10 ವರ್ಷದ ಬಾಲಕ. ಹೆಬ್ಬಾಲೆ ಕನಕ ಬ್ಲಾಕಿನ 13 ವರ್ಷದ ಬಾಲಕ. ಪೊನ್ನಂಪೇಟೆ ಪೋಲೀಸ್ ವಸತಿಗೃಹದ 40 ವರ್ಷದ ಪುರುಷ ಮತ್ತು 6 ವರ್ಷದ ಬಾಲಕಿ. ವಿರಾಜಪೇಟೆ ಹೆಗ್ಗಳದ ಎಡಮಕ್ಕಿ ಅಯ್ಯಪ್ಪ ದೇವಾಲಯ ಬಳಿಯ 33 ವರ್ಷದ ಮಹಿಳೆ. ಗೋಣಿಕೊಪ್ಪ 1ನೇ ಬ್ಲಾಕಿನ 57 ವರ್ಷದ ಪುರುಷ. ಪೊನ್ನಂಪೇಟೆ ಪೋಲೀಸ್ ವಸತಿಗೃಹದ 3 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಬಸವೇಶ್ವರ ಬಡಾವಣೆಯ 18 ವರ್ಷದ ಪುರುಷ ಮತ್ತು 16 ವರ್ಷದ ಬಾಲಕ. ಮೈಸೂರಿನ ಬೈಲುಕುಪ್ಪ ಬಿ.ಎಂ ರಸ್ತೆಯಲ್ಲಿನ 58 ವರ್ಷದ ಪುರುಷ. ಮೇಕೇರಿ ಗೌರಿಶಂಕರ ದೇವಾಲಯ ಬಳಿಯ 50 ವರ್ಷದ ಪುರುಷ. ಮಡಿಕೇರಿ ಬಲ್ಮುರಿಯ ಅಂಗನವಾಡಿ ಬಳಿಯ 23 ವರ್ಷದ ಮಹಿಳೆ. ಮಡಿಕೇರಿ ಮೂರ್ನಾಡಿನ ಗಾಂಧೀನಗರದ 29 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1489 ಆಗಿದ್ದು, 1180 ಮಂದಿ ಗುಣಮುಖರಾಗಿದ್ದಾರೆ. 288 ಸಕ್ರಿಯ ಪ್ರಕರಣಗಳಿದ್ದು, 21 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 245 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment