ವರುಣನ ರೌದ್ರ ನರ್ತನ : ನಾಪೋಕ್ಲು ಸಮೀಪ ಚೆರಿಯಪರಂಬು ಪೈಸಾರಿ ಸಂಪೂರ್ಣ ಮುಳುಗಡೆ

No comments

ವರದಿ: ಹಾರಿಸ್ ನಾಪೋಕ್ಲು
    ನಾಪೋಕ್ಲು (Times Of Coorg) :ನೆನ್ನೆ ದಿನ ಹಗಲು ಕೊಂಚ ಬಿಡುವ ನೀಡಿದ ವರುಣ ಮತ್ತೆ ರಾತ್ರಿಯಿಂದ ಅಬ್ಬರಿಸುತ್ತಾ ರೌದ್ರಾವತಾರ ತಾಳಿದೆ.ಕಳೆದ ಅರವತ್ತು ವರ್ಷಗಳಿಂದ ಕಂಡು ಕೇಳರಿಯದ ಪ್ರವಾಹ ಕಳೆದ ವರ್ಷ  ಕೊಡಗಿನಾದ್ಯಂತ ಸಂಭವಿಸಿದೆ.
ಇದೀಗ ಮತ್ತೆ ಈ ವರ್ಷ ವರುಣನ ಅಬ್ಬದಿಂದ ಕಳೆದ ವರ್ಷದ ಪ್ರವಾಹವನ್ನು ಮೀರಿಸುವಂತಿದೆ.
ಕೊಡಗಿನಾದ್ಯಂತ ಗಾಳಿ ಮಳೆಯ ಅಬ್ಬರದಿಂದ ಹಲವು ಮರಗಳು ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕವಿಲ್ಲದೆ ಕಳೆದ 3ದಿನಗಳಿಂದ ಜನಗಳು ಕತ್ತಲೆಯಲ್ಲಿ ಕಳೆಯುವಂತೆ ಮಾಡಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಅಂತೂ ವಿದ್ಯುತ್ ಸಂಪರ್ಕ ಯಾವಾಗ ಸರಿಹೋಗಬಹುದು ಎಂದು ಜನ ಕಾಯುತ್ತಿದ್ದಾರೆ.

ನಾಪೋಕ್ಲು ಸುತ್ತಮುತ್ತ ಕಾವೇರಿ ನದಿ ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದ್ದು ನಾಪೋಕ್ಲು ದೀಪ ದಂತಾಗಿದೆ.
ಚೇರಿಯ ಪರಂಬು ಪೈಸಾರಿ ಕಳೆದ ವರ್ಷದಂತೆ ಈ ದಿನ  ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇಲ್ಲಿನ ನಿವಾಸಿಗಳ ಮುನ್ನೆಚ್ಚರಿಕೆಯಿಂದ ಯಾವುದೇ ಪ್ರಾಣಾಪಾಯ ಹಾಗೂ ಹಾನಿ ಸಂಭವಿಸಿಲ್ಲ.

ಅದಲ್ಲದೆ ಚರಿಯ ಪರಂಬು ಗ್ರಾಮದ ಬಿಎಸ್ ಗಲ್ಲಿ ದರ್ಗಾ ಹಿಂಭಾಗ ದ ಪ್ರದೇಶಗಳಲ್ಲಿಯೂ ಪ್ರವಾಹ ಆವರಿದಿದ್ದು
ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ.
ಈ ರೀತಿ ವರುಣನ ಅಬ್ಬರ ಮುಂದುವರೆದರೆ ಮತ್ತೊಂದು ದಾಖಲೆಯ ಪ್ರವಾಹ ಕಾಣುವುದರಲ್ಲಿ ಸಂಶಯವಿಲ್ಲ.

No comments

Post a Comment