ನಾಪೋಕ್ಲು - ಕೊಟ್ಟಮುಡಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ

No comments

ವರದಿ :  ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ಸುತ್ತಮುತ್ತ ಮಳೆ ಅಬ್ಬರದಿಂದ ಕಾವೇರಿ ನದಿ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿದ್ದು, ಪ್ರವಾಹದ ಮಟ್ಟ ದಿನೇದಿನೇ ಅಪಾಯಕಾರಿಯಾಗಿ ಏರುತ್ತಲೇ ಇದೆ. ಪಟ್ಟಣದ ಸಮೀಪ ಕಾರೇಕ್ಕಾಡ್ ಎಂಬಲ್ಲಿ  PP ಕಾಂಪ್ಲೆಕ್ಸ್  ಗೆ ಪ್ರವಾಹದ ನೀರು ಆವರಿಸಿಕೊಂಡಿದ್ದು  ಮುಖ್ಯ ರಸ್ತೆಯ ಮೇಲೆ 3 ಅಡಿಗಳಷ್ಟು ನೀರು ಹರಿಯುತ್ತಿದ್ದೆ.

 ಸ್ಥಳಕ್ಕೆ  ನಾಪೋಕ್ಲುಪೊಲೀಸ್  ಠಾಣಾಧಿಕಾರಿ ಆರ್ ಕಿರಣ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ
ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿಷೇಧಿಸಿ
ಬ್ಯಾರಿಕೇಡ್ ಹಾಕಿ ಎಚ್ಚರಿಕೆ ಸೂಚನ ಫಲಕ ಹಾಕಿ ಕ್ರಮ ಕೈಗೊಳ್ಳಲಾಯಿತು.
ಚೆರಿಯ ಪರಂಬು ದರ್ಗಾ ಹಿಂಭಾಗದ ಪ್ರವಾಹ ಆವರಿಸಿ ಮನೆಯಲ್ಲಿ ಸಿಕ್ಕಿಹಾಕಿಕೊಂಡ   ಜನರನ್ನು ಈ ದಿನ NDRF ತಂಡ ಆಗಮಿಸಿ ಬೋಟಿನ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

No comments

Post a Comment