ಕುಶಾಲನಗರ : ಬಡಾವಣೆಗಳು ಜಲಾವೃತ : ತಾವರೆಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತ

No comments


ಕುಶಾಲನಗರ (Times Of Coorg) : ಕೊಡಗು ಜಿಲ್ಲೆಯ ಭಾರಿ ಮಳೆಯಾಗುತ್ತಿದ್ದು, ಕುಶಾಲನಗರದ ಹಲವು ಬಡಾವಣೆಗಳು ಜಲಾವೃತಗೊಂಡಿದೆ. ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಮನೆಗಳಿಗೆ ನೀರು ಪ್ರವೇಶಿಸಿದ್ದು, ನಿವಾಸಿಗಳು ಕಂಗಲಾಗಿದ್ದಾರೆ. ಕುಶಾಲನಗರದಲ್ಲಿ ಐಟಿಐ ಕಾಲೇಜಿನ ಸಮೀಪದಲ್ಲಿರುವ ರಸ್ತೆ ನೀರು ಸಹ ತುಂಬಿದೆ.   ಬಹುಶಃ ಕಳೆದ ವರ್ಷ ಬಂದಿರುವುದಕ್ಕಿಂತ ಹೆಚ್ಚಾಗಿ ನೀರು ಬರುತ್ತದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಕೊಪ್ಪ & ಕೂಡಿಗೆ ಸೇತುವೆ ಬಳಿ ನದಿನೀರು ತುಂಬಿ ಸೇತುವೆ ಮಟ್ಟದಲ್ಲಿ ಹರಿಯುತ್ತಿದೆ. ತಾವರೆಕೆರೆ ಬಳಿ ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ಈ ಮಾರ್ಗದಲ್ಲಿ ಸಂಪರ್ಕ ನಿಷೇಧಿಸಲಾಗಿದೆ. ಸಂಚರಿಸುವವರು ಕುಶಾಲನಗರ - ಗುಮ್ಮನಕೊಲ್ಲಿ - ಹಾರಂಗಿ - ಗುಡ್ಡೆಹೊಸೂರು ಮಾರ್ಗವಾಗಿ ಸಂಚರಿಸಬಹುದಾಗಿದೆ.






No comments

Post a Comment