ಮಡಿಕೇರಿ (Times Of Coorg)* : ಕೊಡಗು ಜಿಲ್ಲೆಯಲ್ಲಿ ಕಳೆದು ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಭಾರಿ ನಾಶನಷ್ಟಗಳು ಸಂಭವಿಸಿದೆ. ತಲಕಾವೇರಿ ಭೂಕುಸಿತದಲ್ಲಿ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದ್ದು ವಿಳಂಬವಾಗುತ್ತಿದೆ. ಮಡಿಕೇರಿ - ಸುಳ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಬರೆಕುಸಿತ ಉಂಟಾಗುತ್ತಿದ್ದು, ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುತ್ತಿದೆ. ಅದಲ್ಲದೇ ಮೊಣ್ಣಗೇರಿ ಸಮೀಪ ಹೆದ್ದಾರಿಯ ಬದಿಯ ಬರೆ ಕುಸಿತಗೊಂಡಿದೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಎರಡನೇ ಮೊಣ್ಣಂಗೇರಿ ಶಾಲೆಯ ರಸ್ತೆ ಮಳೆಗೆ ಕೊಚ್ಚಿಕೊಂಡು ಹೋಗಿದೆ. ನಾಪೋಕ್ಲು ಸಮೀಪದ ಚೆರಿಯಪರಂಬು ಪೈಸಾರಿ, ಮಸೀದಿ ಸಮೀಪ ಸಂಪೂರ್ಣ ಮುಳುಗಡೆಯಾಗಿದೆ. ಸ್ಥಳದಲ್ಲಿ NDRF ,IYC NSUI ಸ್ದಳೀಯರು ಕಾರ್ಯಚರಣೆ ನಡೆಸುತ್ತಿದ್ದಾರೆ. ಕುಂಜಿಲ ದರ್ಗಾ ಶರೀಫ್ ಮುಖ್ಯರಸ್ತೆಯು ಮುಳುಗಡೆಯಾಗಿದೆ. ಕಕ್ಕಬ್ಬೆಯು ಜಲಾವೃತವಾಗಿದೆ. ಎಮ್ಮೆಮಾಡುವಿನ ಭಾರಿ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಹಲವಾರು ಮನೆಗಳು ಜಲಾವೃತಗೊಂಡಿದೆ.
ಕೊಟ್ಟಮುಡಿ - ನಾಪೋಕ್ಲು ರಸ್ತೆಯಲ್ಲಿ ಭಾರಿ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದು ಸಂಚಾರ ನಿಷೇಧಿಸಲಾಗಿದೆ. ಕೊಟ್ಟಮುಡಿ ಮರ್ಕಜ್ ವಿದ್ಯಾಸಂಸ್ಥೆ ಸೇರಿ ಪರಿಸರದ ಬಹುತೇಕ ಮನೆಗಳು ಜಲಾವೃತಗೊಂಡಿದೆ.
ಕೊಂಡಂಗೇರಿ ಗ್ರಾಮದ ನದಿತಟದಲ್ಲಿರುವ ಮನೆಗಳು ಜಲಾವೃತಗೊಂಡಿದ್ದು, ಅನಾಥಾಲಯದವರೆಗೆ ಭಾರಿ ಮಟ್ಟದಲ್ಲಿ ನೀರು ಆವರಿಸಿಕೊಂಡಿದೆ. ಕೊಂಡಂಗೇರಿ - ಅಮ್ಮತ್ತಿ ರಸ್ತೆ ಜಲಾವೃತಗೊಂಡಿದೆ. ಹಾಕತ್ತೂರು - ಬಿಳಿಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ - ಸಿದ್ಧಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಚೇರಂಗಾಲದಲ್ಲಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಚೇರಂಗಾಲದ ಸೇತುವೆಯೊಂದು ಕಸಿದು ಬಿದ್ದು, ಪ್ರದೇಶದ 8 ಕುಟುಂಬಗಳಿಗೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ. ಗೋಣಿಕೊಪ್ಪ ಭಾಗದಲ್ಲಿ ಭಾರಿ ಮಳೆಗೆ ಹಲವಾರು ಮನೆಗಳು ಹಾನಿಗೊಳಗಾಗಿವೆ.
ಮುರ್ನಾಡು , ವಿರಾಜಪೇಟೆ , ನಾಪೋಕ್ಲು , ಭಾಗಮಂಡಲ, ಕರಡಿಗೋಡು ಭಾಗದ ಹಲವಾರು ಪ್ರದೇಶಗಳು ಜಲಾವೃತಗೊಂಡಿದೆ. ನೆಲ್ಯಹುದಿಕೇರಿ ಭಾಗದಲ್ಲಿಯೂ ಮನೆಗಳು ಜಲಾವೃತಗೊಂಡಿದೆ ಎಂದು ತಿಳಿದು ಬಂದಿದೆ. ಮಡಿಕೇರಿ - ಸುಳ್ಯ ಹೆದ್ದಾರಿಯಲ್ಲಿ ಬರೆಕುಸಿತಗೊಂಡಿದ್ದು, ಮುಂಜಾಗೃತಾ ಕೃಮವಾಗಿ ಜಿಲ್ಲಾಧಿಕಾರಿ ಕಛೇರಿ ನಗರಸಭಾ ಕಾರ್ಯಾಲಯಕ್ಕೆ ಸ್ಥಳಾಂತರಿಸಲಾಗಿದೆ. ಸೋಮವಾರಪೇಟೆ - ಮಡಿಕೇರಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ಧರೆಗುರುಳುತ್ತಿದೆ. ಸೋಮವಾರಪೇಟೆ ಗಡಿಭಾಗದ ಶನಿವಾರಸಂತೆ ಭಾಗಗಳಲ್ಲಿ ಮನೆಗಳ ಮೇಲೆ ಮರಗಳು ಬಿದ್ದ ಘಟನೆಗಳು ನಡೆದಿದೆ. ಜಿಲ್ಲೆಯ ಹಲವು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಯ ಕಾರಣದಿಂದಾಗಿ ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬೀಳುತ್ತಿದೆ. ಸೆಸ್ಕ್ ಸಿಬ್ಬಂದಿಗಳು ಮಾರ್ಗ ಸರಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ NDRF ಕಾರ್ಯನಿರತವಾಗಿದೆ. ಜಿಲ್ಲೆಯಲ್ಲಿ ೩ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
- ಈ ವರದಿಯು ಜನರ ಮತ್ತು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಆಧರಿಸಿ ಹಾಗೂ ಧೃಡಿಕರಿಸಿ ತಯಾರಿಸಲಾಗಿದೆ.
(ಚಿತ್ರಗಳನ್ನು ವೀಕ್ಷಿಸಲು IMAGE ಮೇಲೆ ಒತ್ತಿ)
(Tap To see Images Clearly...)
- ಈ ವರದಿಯು ಜನರ ಮತ್ತು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಆಧರಿಸಿ ಹಾಗೂ ಧೃಡಿಕರಿಸಿ ತಯಾರಿಸಲಾಗಿದೆ.
(ಚಿತ್ರಗಳನ್ನು ವೀಕ್ಷಿಸಲು IMAGE ಮೇಲೆ ಒತ್ತಿ)
(Tap To see Images Clearly...)











































































No comments
Post a Comment