ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂಬಂಧ ಸಮಗ್ರ ವರದಿ
ಮಡಿಕೇರಿ (Times Of Coorg );-ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. ಆಗಸ್ಟ್ 05 ರಿಂದ ಆಗಸ್ಟ್ 08 ರ ಬೆಳಗ್ಗೆ ವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮತ್ತು ಆಗಸ್ಟ್ 08 ರ ಬೆಳಗ್ಗೆಯಿಂದ ಆಗಸ್ಟ್ 10 ರ ಬೆಳಗ್ಗೆ ವರೆಗೆ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.. ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುತ್ತದೆ. ಜನವರಿ-2020 ರ ಮಾಹೆಯಿಂದ ಈವರೆಗೆ ಜಿಲ್ಲೆಯಲ್ಲಿ 1,539 ಮಿ.ಮೀ. ಮಳೆಯಾಗಿರುತ್ತದೆ.
ಕಾಣೆಯಾದವರ ಬಗ್ಗೆ ಮಾಹಿತಿ: ಮಡಿಕೇರಿ ತಾಲ್ಲೂಕು ಭಾಗಮಂಡಲ ಹೋಬಳಿ ತಲಕಾವೇರಿಯ ತಪ್ಪಲಿನಲ್ಲಿ ಆಗಸ್ಟ್ 06 ರಂದು ಬ್ರಹ್ಮಗಿರಿ ಬೆಟ್ಟ ಕುಸಿದು ಎರಡು ಮನೆಗಳ ಮೇಲೆ ಬಿದ್ದಿದ್ದು, ಕೊಚ್ಚಿಹೋಗಿರುತ್ತದೆ. ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುತ್ತಾರೆ. ಒಂದು ಮನೆಯಲ್ಲಿ ವಾಸವಿದ್ದ ನಾರಾಯಣ ಆಚಾರ್ (ಅಂದಾಜು 80 ವರ್ಷ), ಶಾಂತ (ನಾರಾಯಣ ಆಚಾರ್ ರವರ ಪತ್ನಿ ಅಂದಾಜು 70 ವರ್ಷ), ಆನಂದತೀರ್ಥ ಸ್ವಾಮಿ (ನಾರಾಯಣ ಆಚಾರ್ ಇವರ ಅಣ್ಣ, ಅಂದಾಜು 86 ವರ್ಷ) ಮತ್ತು ಇಬ್ಬರು ಸಹಾಯಕ ಅರ್ಚಕರು ಸೇರಿ ಒಟ್ಟು 05 ಜನ ಕಣ್ಮರೆಯಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿಯಲಾಗಿದೆ. ಇದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ.
ತಲಕಾವೇರಿಯಲ್ಲಿ ಕಾರ್ಯಾಚರಣೆ: ತಲಕಾವೇರಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ತಂಡ, ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳು ಕಾರ್ಯಾಚರಣೆಗಾಗಿ ತೆರಳಿದ್ದಾರೆ.
ಪ್ರವಾಹ ಸ್ಥಳಗಳು: ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವು ಸ್ಥಳಗಳಲ್ಲಿ ಬರೆಗಳು ಜರಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ತೆರವುಗೊಳಿಸಲು ಕ್ರಮ
ವಹಿಸಲಾಗಿದೆ.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಪ್ರದೇಶಗಳ ವಿವರ: ಮಡಿಕೇರಿ ತಾಲ್ಲೂಕು ಭಾಗಮಂಡಲ, ಅಯ್ಯಂಗೇರಿ, ತಾವೂರು, ತಣ್ಣಿಮಾನಿ, ಸಣ್ಣ ಪುಲಿಕೋಟು, ಬೇತು, ಎಮ್ಮೆಮಾಡು, ಕೊಳಕೇರಿ, ನಾಪೋಕ್ಲು, ಬೆಟ್ಟಗೇರಿ, ದೊಡ್ಡ ಪುಲಿಕೋಟು, ಐಕೊಳ, ಹೊದ್ದೂರು, ಹೊದವಾಡ, ಕುಂಬಳದಾಳು, ಕಿಗ್ಗಾಲು, ಎಸ್.ಕಟ್ಟೆಮಾಡು, ಪರಂಬು ಪೈಸಾರಿ ಸೇರಿದಂತೆ 18
ವಿರಾಜಪೇಟೆ ತಾಲ್ಲೂಕುವಿನ ಕರಡಿಗೋಡು, ಗುಹ್ಯ, ಕೊಂಡಂಗೇರಿ, ಹಚ್ಚಿನಾಡು, ನಾಲ್ಕೇರಿ, ಹೈಸೊಡ್ಲೂರು, ಬಲ್ಯಮಂಡೂರು, ಬಿರುನಾಣಿ, ತೆರಾಲು, ಅರುವತ್ತೊಕ್ಲು, ನಿಡುಗುಂಬ, ಹಾತೂರು, ಮೈತಾಡಿ, ಬಾಳೆಲೆ ಸೇರಿ14.
ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ಕುವೆಂಪು ಬಡಾವಣೆ, ತಮ್ಮಣ್ಣ ಶೆಟ್ಟಿ ಬಡಾವಣೆ, ಬಸವನಹಳ್ಳಿ, ಮಾದಾಪಟ್ಟಣ, ಬೈಚನಹಳ್ಳಿ, ಕೂಡ್ಲೂರು (ನಿಸರ್ಗ ಬಡಾವಣೆ) ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ ಕುಶಾಲನಗರ ಪಟ್ಟಣ ಪಂಚಾಯತಿ ಕುಶಾಲನಗರ ಸಾಯಿ ಬಡಾವಣೆ, ಬಸಪ್ಪ ಬಡಾವಣೆ, ತ್ಯಾಗರಾಜ ರಸ್ತೆ, ವಿವೇಕಾನಂದ ಬಡಾವಣೆ, ರಸೂಲ್ ಬಡಾವಣೆ, ಶೈಲಜಾ ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆ, ಬಿದ್ದಪ್ಪ ಬಡಾವಣೆ, ನಿಜಾಮುದ್ದೀನ್ ಬಡಾವಣೆ, ತಾವರೆಕೆರೆ ರಸ್ತೆ ಸೇರಿ 12 ಸ್ಥಳಗಳನ್ನು ಒಳಗೊಂಡು ಒಟ್ಟು ಪ್ರವಾಹ ಪೀಡಿತ ಪ್ರದೇಶಗಳು 52 ಆಗಿದೆ.
ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿರುವ ಪ್ರದೇಶಗಳ ವಿವರ: ಮಡಿಕೇರಿ ತಾಲ್ಲೂಕು ಬೊಟ್ಲಪ್ಪ ಪೈಸಾರಿ (ಕಡಗದಾಳು), ಜೋಡುಪಾಲ, ನೀರುಕೊಲ್ಲಿ, ಕೊಟ್ಟಮುಡಿ, ಹೊದವಾಡ, ಅಬ್ಯಾಲ ನಗರಸಭೆ ಮಡಿಕೇರಿಯಲ್ಲಿ ದೇಚೂರು, ಸೋಮವಾರಪೇಟೆ ತಾಲ್ಲೂಕು ಅತ್ತೂರುನಲ್ಲೂರು (ಕೊಟ್ಟಗೇರಿ ಪೈಸಾರಿ), ತಾಕೇರಿ, ಸೂರ್ಲಬ್ಬಿ, ಮಾದಾಪುರ, ಶಾಂತಳ್ಳಿ ಹಾಗೂ ವಿರಾಜಪೇಟೆ ತಾಲ್ಲೂಕು ಮಗ್ಗುಲದಲ್ಲಿ ಭೂಕುಸಿತ ಉಂಟಾಗಿದೆ.
ಸಂತ್ರಸ್ಥರ ರಕ್ಷಣೆ: ಜಿಲ್ಲೆಯಲ್ಲಿ ಈವರೆಗೆ ರಕ್ಷಿಸಲಾಗಿರುವ ಸಂತ್ರಸ್ಥರು, ನಾಪೋಕ್ಲು 13 ಜನರನ್ನು ಎನ್‍ಡಿಆರ್‍ಎಫ್ ತಂಡದ ವತಿಯಿಂದ, ಹೊದವಾಡದಲ್ಲಿ 13 ಜನರನ್ನು ಎನ್‍ಡಿಆರ್‍ಎಫ್ ತಂಡದ ವತಿಯಿಂದ, ನೆಲ್ಲಿಹುದಿಕೇರಿಯ 96 ಜನರನ್ನು ಕ್ಷಿಪ್ರ ಕಾರ್ಯಚರಣೆ ತಂಡದಿಂದ, ಕಡಗದಾಳು 150 ಮಂದಿಯನ್ನು ಕ್ಷಿಪ್ರ ಕಾರ್ಯಚರಣೆ ತಂಡದಿಂದ, ಕೊಟ್ಟಮುಡಿ 29 ಜನರನ್ನು ಎನ್‍ಡಿಆರ್‍ಎಫ್ ವತಿಯಿಂದ, ಚೆರಿಯಪರಂಬು 7 ಮಂದಿಯನ್ನು ಎನ್‍ಡಿಆರ್‍ಎಫ್ ವತಿಯಿಂದ, ಬಾಳೆಗುಂಡಿ ಗ್ರಾಮ (ವಾಲ್ನೂರು ತ್ಯಾಗತ್ತೂರು)6 ಮಂದಿಯನ್ನು ಕ್ಷಿಪ್ರ ಕಾರ್ಯಚರಣೆ ತಂಡದಿಂದ ನಲ್ವತ್ತೆಕರೆ 12 ಜನರನ್ನು ಕ್ಷಿಪ್ರ ಕಾರ್ಯಚರಣೆ ತಂಡದಿಂದ ಬೆಟ್ಟಗೇರಿ 8, ಬೊಟ್ಲಪ್ಪ ಪೈಸಾರಿ, ಕಡಗದಾಳು 51, ಕೈಮಾಡು 5, ನೀರುಕೊಲ್ಲಿ 43, ಮೈತಾಡಿ 40, ಕೊಂಡಂಗೇರಿ 8, ಸಿದ್ದಾಪುರ (ಕುರುಬರ ಗುಂಡಿ) 8, ತಣ್ಣಿಮಾನಿ 50, ಬೆಟ್ಟದಕಾಡು 10, ಅತ್ತೂರು ನಲ್ಲೂರು ಕೊಟ್ಟಗೇರಿ ಪೈಸಾರಿ10, ಬಾಳೆಲೆ 2 ಪೊಲೀಸ ಇಲಾಖಾ ತಂಡದಿಂದ ಸೇರಿದಂತೆ ಒಟ್ಟು 561 ಮಂದಿಯನ್ನು ರಕ್ಷಿಸಲಾಗಿದೆ.
ಜಿಲ್ಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಗಳ ವಿವರ: ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿ, ಕಾಶಿಮಠ 52 ಕುಟುಂಬದ 109 ಮಂದಿ ಆಶ್ರಯ ಪಡೆದಿದ್ದಾರೆ. ಕೆ.ವಿ.ಜಿ.ಕಾಲೇಜು, ಭಾಗಮಂಡಲದ 57 ಕುಟುಂಬಗಳ 165 ಮಂದಿ, ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ, ಕಡಗದಾಳುವಿನಲ್ಲಿ 22 ಕುಟುಂಬದ 40 ಮಂದಿ ಸೇರಿದಂತೆ ಮಡಿಕೇರಿ ತಾ: ಒಟ್ಟು 3 ಕೇಂದ್ರಗಳಲ್ಲಿ 131 ಕುಟುಂಬದ 314 ಮಂದಿ ಆಶ್ರಯ ಪಡೆದಿದ್ದಾರೆ.
ವಿರಾಜಪೇಟೆ ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರಡಿಗೋಡುವಿನಲ್ಲಿ 23 ಕುಟುಂಬದ 53 ಮಂದಿ, ಸರ್ಕಾರಿ ಪ್ರೌಢಶಾಲೆ, ಕೊಂಡಂಗೇರಿಯ 8 ಕುಟುಂಬದ 27 ಮಂದಿ, ಬಸವೇಶ್ವರ ಸಮುದಾಯ ಭವನ, ಕರಡಿಗೋಡುವಿನಲ್ಲಿ 5 ಕುಟುಂಬದ 27 ಮಂದಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹುದಿಕೇರಿಯ 31 ಕುಟುಂಬದ 112 ಮಂದಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಲ್ಯಮಂಡೂರು ವಿನಲ್ಲಿ 5 ಕುಟುಂಬದ 16 ಮಂದಿ,ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಚಿಕ್ಕಪೇಟೆ, ವಿರಾಜಪೇಟೆಯ 11 ಕುಟುಂಬದ 17 ಮಂದಿ ಸೇರಿದಂತೆ ವಿರಾಜಪೇಟೆ ತಾ: ಒಟ್ಟು 6 ಕೇಂದ್ರಗಳು 83 ಕುಟುಂಬದ 252 ಮಂದಿ ಆಶ್ರಯ ಪಡೆದಿದ್ದಾರೆ. ಜಿಲ್ಲೆಯ ಒಟ್ಟು 9 ಪರಿಹಾರ ಕೇಂದ್ರಗಳಲ್ಲಿ 214 ಕುಟುಂಬದ 566 ಮಂದಿ ಆಶ್ರಯ ಪಡೆದಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಈವರೆಗೆ ಯಾವುದು ತೆರೆದಿರುವುದಿಲ್ಲ.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಸಂತ್ರಸ್ಥರಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ.
ಭೂ ಕುಸಿತ ಮತ್ತು ಪ್ರವಾಹದಿಂದ ಬಂದ್ ಆದ ರಸ್ತೆಗಳ ವಿವರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಜರಿದಿರುವುದರಿಂದ ಮತ್ತು ಮರ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ತುರ್ತಾಗಿ ಕ್ರಮ ವಹಿಸಬಹುದಾದ ಕಡೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ತುರ್ತು ಕ್ರಮ ವಹಿಸಿ ರಸ್ತೆಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಜಿಲ್ಲೆಯ ಕೆಲವು ರಸ್ತೆಗಳು ಭೂ ಕುಸಿತ ಮತ್ತು ಪ್ರವಾಹದಿಂದ ಬಂದ್ ಆಗಿರುತ್ತವೆ.
ವಾಹನ ಸಂಚಾರ ಸ್ಥಗಿತಗೊಂಡಿರುವ ರಸ್ತೆಗಳು: ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಶಾಲನಗರದಿಂದ-ಗುಡ್ಡೆ ಹೊಸೂರಿನ ವರೆಗಿನ ಸಂಚಾರ. ಕತ್ತಲೆಕಾಡು-ಮರಗೋಡು ರಸ್ತೆ ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಬೇತ್ರಿ ಸೇತುವೆಯ ಮೇಲಿನ ಸಂಚಾರ. ಮುತ್ತಾರುಮುಡಿ, ಕಗ್ಗೊಡ್ಲು, ಭಾಗಮಂಡಲ-ಅಯ್ಯಂಗೇರಿ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ
ಚೆಟ್ಟಿಮಾನಿ ಕಿರಿಯ ಸೇತುವೆ ರಸ್ತೆ
ಅತಿವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿರುತ್ತಾರೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ. ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ 24x7 ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾಟ್ಸಪ್‍ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ.
ಹಾರಂಗಿ ಜಲಾಶಯದಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ:08272-221077 ಮತ್ತು ವಾಟ್ಸಪ್ ನಂ.8550001077 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment