ಜಿಲ್ಲೆಯಲ್ಲಿ ಭಾರಿ ಮಳೆಗೆ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು, ಈ ಸಂದರ್ಭ ಎಸ್ಸೆಸ್ಸೆಫ್ ಅಯ್ಯಂಗೇರಿ ಯೂನಿಟ್ ವತಿಯಿಂದ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಳೆಗೆ ಜಲಾವೃತಗೊಂಡಿದ್ದ ಕೊಟ್ಟಮುಡಿಯ ಮರ್ಕಝ್ ವಿದ್ಯಾಸಂಸ್ಥೆಯ ಮಸೀದಿ , ಶಾಲಾ ಕಾಲೇಜು ಕಟ್ಟಡಗಳನ್ನು, ಮನೆಗಳನ್ನು ಎಸ್ಸೆಸ್ಸೆಫ್ ಕೊಟ್ಟಮುಡಿ ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು.
ಜಲಾವೃತಗೊಂಡಿದ ಚೆರಿಯಪರಂಬು ಮಸ್ಜಿದ್ , ಮದರಸವನ್ನು ಎಸ್ಸೆಸ್ಸಫ್ ಚೆರಿಯಪರಂಬು ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು. ಎಮ್ಮೆಮಾಡುವಿನ ಹಲವು ಮನೆಗಳು ಹಾನಿಗೊಳಗಾಗಿದ್ದು ಆ ಮನೆಗಳನ್ನು ಸರಿಪಡಿಸಲು ಎಸ್ಸೆಸ್ಸಫ್ ಎಮ್ಮೆಮ್ಮಾಡು ಶಾಖೆಯ ಕಾರ್ಯಕರ್ತರು ಧಾವಿಸಿದ್ದರು , ಹಲವು ಮನೆಗಳ ಮೇಲ್ಛಾವಣೆಗಳನ್ನು ಸರಿಪಡಿಸಿಕೊಟ್ಟರು. ಸಂಪೂರ್ಣ ಹಾನಿಗೊಳಗಾಗಿದ್ದ ಮನೆಯ ಶೀಟ್ ಗಳನ್ನು ಬದಲಾಯಿಸಿ ಹೊಸ ಶೀಟ್ ಗಳನ್ನು ಹಾಕಿ ಸರಿಪಡಿಸಿದರು. ಅದೇ ರೀತಿ ಹಾನಿಗೊಳಗಾಗಿದ್ದ ಮನೆಯವರಿಗೆ ನೀಡಿದರು.
ಎಸ್ಸೆಸ್ಸಫ್ ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಜಿಲ್ಲೆಯ ಹಲವು ಭಾಗಗಳಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿದೆ. ಈಗಾಗಲೇ ಹಲವು ಪ್ರಳಯಭಾದಿತ ಪ್ರದೇಶಗಳಲ್ಲಿ ಕಾರ್ಯಚರಣೆಗಿಳಿದಿದ್ದಾರೆ. ಅದಲ್ಲದೇ ಕೊಡಗಿನ ಮೂರು ತಾಲೂಕಿನಲ್ಲಿಯು ಹೆಲ್ಪ್ ಲೈನ್ ಪ್ರಾರಂಭಿಸಿದ್ದು , ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಜಾತಿ ಭೇದ ಭಾವ ವಿಲ್ಲದೆ ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಎಸ್ಸೆಸ್ಸಫ್ ಜಿಲ್ಲಾ ಸಮಿತಿ ಕೋರಿದೆ.
- Reported By Shibili Kalkandoor
>> SSF ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್














No comments
Post a Comment