ನಾಪೋಕ್ಲು : ಮಳೆಯ ಅಬ್ಬರದಿಂದ ಕುಸಿದು ಬಿದ್ದ ಮನೆ
ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ಗ್ರಾಮಪಂಚಾಯಿತಿಗೆ ಒಳಪಟ್ಟ ಹಳೇತಾಲೂಕು ಸಮೀಪದ ಕುಂಬಾರಕೇರಿ ನಿವಾಸಿ ಸರ್ಫುದ್ದಿನ್ ಎಂಬುವವರ ಮನೆ ಈ ದಿನ ಬಾರಿ ಗಾಳಿ-ಮಳೆಯಿಂದಾಗಿ ಕುಸಿದು ಬಿದ್ದು ಸಂಪೂರ್ಣವಾಗಿ ಹಾನಿಯಾಗಿದೆ. ವಿಷಯ ತಿಳಿದು ಇಲ್ಲಿಗೆ ಕಂದಾಯ ಅಧಿಕಾರಿಗಳು ಹಾಗೂ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾಜಿ ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆ ಕಳೆದು ಕೊಂಡು ಸಂಕಷ್ಟದಲ್ಲಿರುವ ಸರ್ಫುದ್ದೀನ್ ತೀರಾ ಬಡವನಾಗಿದ್ದು ಮನೆ ಕಳೆದು ಕೊಂಡು ಇವರ ಬದುಕು ಇದೀಗ ಅತಂತ್ರ ವಾಗಿದೆ .
ಇವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡಿದ್ದು ಕೂಡಲೇ ಮನೆ ಹಾನಿ ಪರಿಹಾರ ನಿದಿಗೆ ಸೇರಿಸಿ ಇವರಿಗೆ ಸೂಕ್ತವಾ ಮನೆನಿರ್ಮಿಸಿ ಕೊಡಬೇಕೆಂದು ನಾಪೋಕ್ಲು ಗ್ರಾಮಪಂಚಾಯಿತಿ ಮಾಜಿ ಸದಸ್ಯ ಮೊಹಮ್ಮದ್ ಟಿ. ಎ. ಮನವಿಮಾಡಿದ್ದಾರೆ.


No comments
Post a Comment