ನಾಪೋಕ್ಲುವಿನಲ್ಲಿ ಬಿಸಿಲಿನ ಆಗಮನ ನಿಟ್ಟುಸಿರುಬಿಟ್ಟ ಜನ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಕಳೆದ ಒಂದು ವಾರದಿಂದ ಎಡೆಬಿಡದೆ ನಿರಂತರ ಸುರಿಯುತ್ತಿರುವ ಪುಷ್ಯ ಮಳೆಯ ಅಬ್ಬರದಿಂದ ರಸ್ತೆ ಸಂಪರ್ಕವಿಲ್ಲದೆ ಕಳೆದ ನಾಲ್ಕು ದಿನಗಳಿಂದ ಹಾಲು ಸರಬರಾಜು ಸ್ಥಗಿತಗೊಂಡು
ಈ ದಿನ ಬೆಳಿಗ್ಗೆ ಹಾಲು ಹಾಲು ಸರಬರಾಜು ಆಗಿದ್ದನ್ನು ತಿಳಿದು ಹಾಲಿಗಾಗಿ ಸ್ಥಳೀಯರು ಮುಗಿಬಿದ್ದ ದೃಶ್ಯ ನಾಪೋಕ್ಲು ಪಟ್ಟಣದ ಹಾಲಿನ ಅಂಗಡಿ ಮುಂಭಾಗ ಕಂಡುಬಂತು.
ಒಂದು ಕಡೆ ಪ್ರವಾಹ ಮತ್ತೊಂದು ಕಡೆ ಮೋಡದಿಂದ ಹಗಲು ಸಮಯ ಕತ್ತಲೆಯ ವಾತಾವರಣ ವಾದರೆ ರಾತ್ರಿ ಸಮಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಸಂಪೂರ್ಣಕತ್ತಲೆಯಲ್ಲಿ ಕಳೆಯುವಂತಾದರೆ.
ಮತ್ತೊಂದು ಕಡೆ ಪ್ರವಾಹ ಆವರಿಸಿ ನೀರಿನಲ್ಲಿ ಮುಳುಗಡೆಯಾದ ಮನೆಯ ಮಾಲೀಕರ ಎದೆಬಡಿತ ಜೋರಾಗಿದ್ದರೆ ಮತ್ತೊಂದು ಕಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಯಿಂದ ಹೊರಬರಲಾಗದೆ ಜನರು ಪರದಾಡುತ್ತಿದ್ದಾರೆ.
ಈ ದಿನ ಬಿಸಿಲಿನ ಆಗಮನದಿಂದ ಈ ವ್ಯಾಪ್ತಿಯ ಜನರು
ಅಬ್ಬಬ್ಬಾ ಈಗಲಾದರೂ ಹಲವರ ಪ್ರಾರ್ಥನೆಯ ಫಲವಾಗಿ ಕೊನೆಗೂ ಮಳೆಯ ಅಬ್ಬರ ಕಡಿಮೆಯಾಯಿತಲ್ಲಾ ಅನ್ನುತ್ತಾ ಬಿಸಿಲಿನ ವಾತಾವರಣ ಮುಂದುವರಿದು ಆದಷ್ಟು ಬೇಗ ಪ್ರವಾಹ ಕಡಿಮೆಯಾಗಿ ವಿದ್ಯುಚ್ಛಕ್ತಿ ಸಂಪರ್ಕ ಲಭಿಸಲಿ ಎಂದು ಪ್ರಾರ್ಥಿಸುತ್ತಿದ್ದರು.




No comments
Post a Comment