ನಾಪೋಕ್ಲು ಕೈಕಾಡು ಪಾರಾಣೆ ಸಂಪರ್ಕ ರಸ್ತೆ ಸಂಪೂರ್ಣ ಜಲಾವೃತ

No comments

ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಕೈಕಾಡು ಪಾರಾಣೆ ಈ  ಪ್ರದೇಶದಲ್ಲಿ ಹಲವಾರು ಕುಟುಂಬಗಳು ವಾಸವಿದ್ದು ಮಳೆಯ ಅಬ್ಬರದಿಂದ ಪ್ರದೇಶದ ಸುತ್ತಲೂ ಪ್ರವಾಹ ಆವರಿಸಿ ಈ ಪ್ರದೇಶದ ನಿವಾಸಿಗಳು   ಸಂಕಷ್ಟದಲ್ಲಿ ಸಿಲುಕಿರುತ್ತಾರೆ.

ಇಲ್ಲಿನನಿವಾಸಿಗಳು ಅಗತ್ಯ ವಸ್ತುಗಳ ಖರೀದಿಗಾಗಿ ನಾಪೋಕ್ಲು ಪಟ್ಟಣವನ್ನು ಅವಲಂಬಿಸಿರುತ್ತಾರೆ. ಇಲ್ಲಿ ಯಾವುದೇ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕವಿಲ್ಲದೆ ಯಾರನ್ನು ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಈ ಪ್ರದೇಶದ  ಜನರ ಬಗ್ಗೆ ಗಮನಹರಿಸಬೇಕಾಗಿ ಇಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.

No comments

Post a Comment