**
ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು ಬೀದಿನಾಯಿಗಳ ಹಾವಳಿಯಿಂದ ನಾಪೋಕ್ಲು ಪಟ್ಟಣಕ್ಕೆ ಬರುವಂತಹ ಸಾರ್ವಜನಿಕರಿಗೆ ನಡೆದಾಡಲು ಆಗದಂತಹ ಪರಿಸ್ಥಿತಿ ಉಂಟಾಗಿದೆ.
ಅದೇ ರೀತಿ ಬೆಳಗಿನ ಜಾವ ಹಾಲು ಹಾಗೂ ಪತ್ರಿಕೆ ಖರೀದಿಗೆ ಬರುವಂತಹ ಮಕ್ಕಳನ್ನು ಬೀದಿನಾಯಿಗಳು ಅಟ್ಟಾಡಿಸಿಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗಿದ್ದು
ಇದರ ಸಂಬಂಧ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಅದಲ್ಲದೆ ಪತ್ರಿಕೆಯಲ್ಲಿ ಕೂಡ ಮೂರು ತಿಂಗಳ ಹಿಂದೆ ವಿಸ್ಕೃತ ವರದಿ ಪ್ರಕಟವಾಗಿದ್ದು, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಸಂಬಂಧ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಅದಲ್ಲದೆ ಪತ್ರಿಕೆಯಲ್ಲಿ ಕೂಡ ಮೂರು ತಿಂಗಳ ಹಿಂದೆ ವಿಸ್ಕೃತ ವರದಿ ಪ್ರಕಟವಾಗಿದ್ದು, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿಗಳು ಕಚ್ಚಿ ಅನಾಹುತ ಸಂಭವಿಸುವುದಕ್ಕಿಂತ ಮುಂಚಿತವಾಗಿ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಕ್ರಮಕೈಗೊಳ್ಳಬೇಕೆಂದು ನಾಪೋಕ್ಲುವಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

No comments
Post a Comment