ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ಈ ವರ್ಷದ ಅತಿವೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಪ್ರವಾಹ ಆವರಿಸಿ ಹಲವು ಮನೆಗಳು ಸಂಪೂರ್ಣ ಹಾನಿಯಾದರೆ , ಹಲವು ಮನೆಗಳು ಭಾಗಶಃ ಹಾನಿಯಾಗಿದ್ದು ಕೆಲವು ಮನೆಗಳು ಅಲ್ಪಸ್ವಲ್ಪ ಹಾನಿಯಾಗಿ ಮನೆ ಮಾಲೀಕರು ಕಂಗಾಲಾಗಿದ್ದಾರೆ.
ಈ ದಿನ ನಾಪೋಕ್ಲು ಬೇತು ಗ್ರಾಮದಲ್ಲಿ ಮಳೆಗೆ ಹಾನಿಯಾದ ಅಬ್ದುಲ್ಲಾ ಎಂಬವರ ಮನೆಗೆ ಕೆಪಿಸಿಸಿ ಸದಸ್ಯ ಕಡ್ದಣಿಯಂಡ ಹರೀಶ್ ಬೋಪಣ್ಣ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್ ಎ ಹಂಸ ಕೊಟ್ಟಮುಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎ ಇಸ್ಮಾಯಿಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್ ಎ ಹಂಸ ಕೊಟ್ಟಮುಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎ ಇಸ್ಮಾಯಿಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸಂದರ್ಭ ಹರೀಶ್ ಬೋಪಣ್ಣ ನವರು ವೈಯಕ್ತಿಕವಾಗಿ
ಮನೆಯವರಿಗೆ ಧನಸಹಾಯ ಮಾಡಿದರು.
ಮತ್ತೊಂದು ಕಡೆ ಕಳೆದ ವರ್ಷದ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸರಕಾರ 5 ಲಕ್ಷ ಪರಿಹಾರ ಘೋಷಣೆ ಮಾಡಿ 10 ತಿಂಗಳೊಳಗಾಗಿ 5 ಕಂತುಗಳಲ್ಲಿ ಕೊಡುವುದಾಗಿ ಭರವಸೆ ಕೊಟ್ಟಿದ್ದು, ಆದರೆ ವರ್ಷ ಕಳೆದರೂ ಈವರೆಗೆ ಬರೀ ಎರಡು ಕಂತುಗಳ ಎರಡು ಲಕ್ಷ ರೂಪಾಯಿ ಮಾತ್ರ ಕೈಸೇರಿದ್ದು, ಇದರಿಂದ ಮನೆ ಕಳೆದುಕೊಂಡ ಕುಟುಂಬದ ಬದುಕು ಅತಂತ್ರವಾಗಿದೆ.
ಆದಷ್ಟು ಬೇಗ ಉಳಿದ ಹಣವನ್ನು ಬಿಡುಗಡೆ ಮಾಡಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.
ಆದಷ್ಟು ಬೇಗ ಉಳಿದ ಹಣವನ್ನು ಬಿಡುಗಡೆ ಮಾಡಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.

No comments
Post a Comment