ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ - ಕೊಡಗು : ಸದಸ್ಯತ್ವ ಕಾರ್ಡ್ ಅನಾವರಣ

No comments

ಮಡಿಕೇರಿ (Times Of Coorg) : ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲೆಯ ಅಧೀನದಲ್ಲಿ ವಿದೇಶದಲ್ಲಿರುವ ಕೊಡಗು ಜಿಲ್ಲೆಯ ಕಾರ್ಯಕರ್ತರಿಗಾಗಿ ರೂಪಿಸಿದ ಕನ್ನಡಿಗರ ಆಶಾಕಿರಣ, ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ  ಎಸ್.ಕೆ.ಎಸ್ ಎಸ್.ಎಫ್ ಜಿಸಿಸಿ - ಕೊಡಗು ಸಮಿತಿಯ ಅಧಿಕೃತ ಸದಸ್ಯತ್ವ ಕೊಡಗು ಕಾರ್ಡ್ ಅನಾವರಣ ಕಾರ್ಯಕ್ರಮವು ಸರಳವಾಗಿ ನಡೆಯಿತು.

 ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ - ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ದುಬೈ, ಎಸ್ ಕೆ ಎಸ್ ಎಸ್ ಎಫ್ ಯು ಎ ಇ - ಕೊಡಗು ಕಾರ್ಯದರ್ಶಿಯಾದ ಇರ್ಷಾದ್ ಕೂಡಿಗೆ ರವರಿಗೆ ಸದಸ್ಯತ್ವ ಕಾರ್ಡ್ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೌದಿ-ಅರೇಬಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ - ಕೊಡಗು
ದಹ್ವಾ ವಿಂಗ್ ಅಧ್ಯಕ್ಷರಾದ ಸಿದ್ದೀಕ್ ಬಾಖವಿ ರವರು ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ - ಕೊಡಗು  ಉಪಾಧ್ಯಕ್ಷರಾದ ಜೈನುದ್ದಿನ್ ಉಸ್ತಾದ್ ರವರಿಗೆ  ನೀಡುವುದರೊಂದಿಗೆ ಸದಸ್ಯತ್ವ ಕಾರ್ಡ್ ಅನಾವರಣ ಗಳಿಸಿದರು. ಎಲ್ಲಾ ಕಾರ್ಯಕ್ರಮದ ಯಶಸ್ವಿಗೆ ಹಗಲಿರುಳು  ಶ್ರಮಿಸುತ್ತಿರುವ  ಎಸ್.ಕೆ‌.ಎಸ್.ಎಸ್.ಎಫ್  ಜಿಸಿಸಿ  ಕೊಡಗು ಮಾಧ್ಯಮ ವಿಭಾಗದ ಕಾರ್ಯಗಳನ್ನು ಸಮಿತಿ ಸದಸ್ಯರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಜಿಸಿಸಿ - ಕೊಡಗು ಮಾಧ್ಯಮ ವಿಭಾಗದ ಅಧ್ಯಕ್ಷರಾದ ಶಫೀಕ್
ನೆಲ್ಲಿಯಹುದಿಕೇರಿ, ಅಶ್ರಫ್ ಮಿಸ್ಬಾಹಿ, ಅಬ್ದುಲ್ ರಝಾಕ್ ಬಜೆಗುಂಡಿ ಭಾಗವಹಿಸಿದ್ದರು. ಆನ್ಲೈನ್ ಮೂಲಕ ನಡೆದ  ಕಾರ್ಯಕ್ರಮವನ್ನು ಜಿಸಿಸಿ ಸಮಿತಿಯ ನಾಯಕರುಗಳು ಹಾಗೂ ಸದಸ್ಯರುಗಳು ವೀಕ್ಷಿಸಿದರು. ಎಸ್ ಎಸ್ ಎಫ್ ಜಿಸಿಸಿ - ಕೊಡಗು ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ವಂದಿಸಿದರು.ಯಾಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.

No comments

Post a Comment