ಕೊಡಗು ಮುಸ್ಲಿಂ ಒಕ್ಕೂಟದಿಂದ ರಾಷ್ಟ ಪದಕ್ಕ ವಿಜೇತ ದಿವಾಕರ್ ರವರಿಗೆ ಗೆ ಸನ್ಮಾನ
ಮಡಿಕೇರಿ (Times Of Coorg) : ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಬಾಜನರಾದ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಅವರನ್ನು ಕೊಡಗು ಮುಸ್ಲಿಂ ಒಕ್ಕೂಟ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭ ಒಕ್ಕೂಟದ ಜಿಲ್ಲಾಧ್ಯಕ್ಷ ಶರ್ಫುದ್ಧೀನ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ರಜಾಕ್, ಉಪಾಧ್ಯಕ್ಷ ಜಾಫರ್ ಶರೀಫ್, ಜಿಲ್ಲಾ ಸಂಚಾಲಕ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ನಿಚ್ಚು ಮೂರ್ನಾಡು, ಉಪಸ್ಥಿತರಿದ್ದರು

No comments
Post a Comment