ಕೊಡಗು ದಫ್ ಸಮಿತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

No comments

ವಿರಾಜಪೇಟೆ (Times Of Coorg) : ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಉಮ್ಮರ್ ಮಾಸ್ಟರ್ ವಿದ್ಯಾರ್ಥಿಗಳಿಗೆ  ಕರೆ ನೀಡಿದರು.

ಎನ್ ಸಿ ಟಿ  ಎಂಟರ್ಪ್ರೈಸಸ್ ಕಚೇರಿಯ ಸಭಾಂಗಣದಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕೊಡಗು ದಫ್  ಸಮಿತಿ ವತಿಯಿಂದ ಸನ್ಮಾನ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು


ಹೆಚ್ಚು ಮೊಬೈಲ್ ಬಳಕೆಯಿಂದ ದೂರವಿದ್ದು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತವಾಗಿ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ಹೇಳಿದ ಅವರು ಪೋಷಕರು ಹಾಗೂ ವಿವಿಧ  ಸಂಘಟನೆಗಳ ಪ್ರಮುಖರು  ಹಾಗೂ ದಾನಿಗಳು  ಸಮಾಜದ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮುಂದೆ ತರುವ ಪ್ರಯತ್ನ ಮಾಡಬೇಕೆಂದರು.


ಕೊಡಗು ದಫ್ ಸಮಿತಿ ಅಧ್ಯಕ್ಷ ಅಲೀರ ಎಂ ರಷೀದ್ ಮಾತನಾಡಿ ದಫ್  ಸಮಿತಿ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ದಫ್ ಸ್ಪರ್ಧೆ, ಆನ್ಲೈನ್ ಗಾಯನ ಸ್ಪರ್ಧೆ ಸೇರಿದಂತೆ ಕಳೆದ ಹಲವು ವರ್ಷಗಳಿಂದಲೂ  ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು  ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನ ಪ್ರೋತ್ಸಾಹಿಸಿ ಗೌರವಿಸುವ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಗಿದ್ದು ಜಿಲ್ಲೆಯ ನಾನಾ ಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ .


ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಸಮಿತಿ ಮುಂದಾಗಿದ್ದು  ಎನ್ ಸಿ ಟಿ ಸಂಸ್ಥೆಯ ಮುಖ್ಯಸ್ಥ ಅಕ್ಕಳತಂಡ ಮೊಯ್ದು ಅವರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಧನಸಹಾಯವು ನೀಡಲಾಗಿದೆ ಎಂದರು.


ಸ್ಥಾಪಕ ಅಧ್ಯಕ್ಷ ಮಜೀದ್ ಚೋಕಂಡಳ್ಳಿ ಮಾತನಾಡಿ ಉನ್ನತ ಪದವಿಯಲ್ಲಿ ಮಹಿಳಾ ಅಧಿಕಾರಿಗಳು ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ . ಶಿಕ್ಷಣದ ಮೂಲಕ ಸಾಧಿಸುವ ಛಲದೊಂದಿಗೆ ಪ್ರತಿಭಾನ್ವಿತರಾಗಿ ಸಮಾಜದಲ್ಲಿ ಗುರುತಿಸುವ ಮೂಲಕ  ಭವಿಷ್ಯ ರೂಪಿಸಿಕೊಳ್ಳಬೇಕೆಂದರು.


ಗೌರವ ಅಧ್ಯಕ್ಷ ಅಕ್ಕಳತಂಡ ಮೊಯ್ದು, ಉಪಾಧ್ಯಕ್ಷ ಜುಬೈರ್ ಕಡಂಗ, ಖಜಾಂಜಿ ಬಷೀರ್, ಪ್ರಮುಖರಾದ ಜುಬೈರ್ ಮುಸ್ಲಿಯಾರ್,ಅಸ್ರಫ್ ಎಮ್ಮೆಮಾಡು ,ಅಬ್ಬಾಸ್ ಜೈನಿ , ಅಶ್ರಪ್ ವಯಕ್ಕೋಲ್,  ತೌಸೀಪ್ ಅಮ್ಮತ್ತಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

No comments

Post a Comment