ಎಸ್ ಎಸ್ ಎಫ್ ಕೊಡಗು ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ರಕ್ತದಾನ ಶಿಬಿರ

No comments


ಸೋಮವಾರಪೇಟೆ (Times Of Coorg) : ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಕೊಡಗು ಜಿಲ್ಲಾ ಸಮಿತಿ ಬ್ಲಡ್ ಸೈಬೋ ವತಿಯಿಂದ ದಿನಾಂಕ 25 ಆಗಸ್ಟ್ 2020 ರಂದು ನೆಲ್ಯಾಹುದಿಕೇರಿಯ ದಾರುನ್ನಜಾತ್ ಏಜ್ಯುಕೇಶನಲ್ ಸೆಂಟರ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.

ಎಸ್ ಎಸ್ ಕೊಡಗು ಜಿಲ್ಲಾ ಬ್ಲಡ್ ಸೈಬೋ, ಮೆಡಿಕಲ್ ಕಾಲೇಜು ಮಡಿಕೇರಿ ಇದರ ಸಹಯೋಗದೊಂದಿಗೆ ನಡೆದ  ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿಯವರು , ಎಸ್ ಎಸ್ ಎಫ್ ಸಂಘಟನೆಯ ಬ್ಲಡ್ ಸೈಬೋ ರಾಜ್ಯಾದ್ಯಾಂತ ಸುಮಾರು ಹದಿನಾರು ಸಾವಿರಕ್ಕಿಂತಲೂ ಹೆಚ್ಚು ಯೂನಿಟ್ ರಕ್ತವನ್ನು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಸಂಗ್ರಹಿಸಿ ರೋಗಿಗಳ ಪಾಲಿನ ಆಶಾಕಿರಣವಾಗಿದೆ. ಇನ್ನೂ ಕೂಡ ಸದಾ ಸಿದ್ಧವಾಗಿದೆ.  ರಾಜ್ಯಾದ್ಯಂತ ಎಸ್ ಎಸ್ ಎಫ್ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಮಾಜ ಸೇವೆಗೆ ಜಾತಿ ಧರ್ಮ ಭೇದಬಾವಗಳಿಲ್ಲದೆ ಮುನ್ನುಗುತ್ತಿದೆ. ಉದ್ಘಾಟನೆಯನ್ನು ಮಾಡಿ ಮಾತನಾಡಿದ ಎಸ್ ವೈ ಎಸ್ ಕರ್ನಾಟಕ ರಾಜ್ಯ ಮೀಡಿಯಾ ಕಾರ್ಯದರ್ಶಿ ಎಂ.ವೈ ಅಬ್ದುಲ್ ಹಫೀಳ್ ಸಅದಿ ರವರು ಎಸ್ ಎಸ್ ಎಫ್ ಸಂಘಟನೆಯು ಕಳೆದ ಮೂವತ್ತು ವರ್ಷಗಳಿಂದ ಕಾರ್ಯಚರಿಸುತ್ತಿದ್ದು, ಇಂತಹ ಹಲವಾರು ಸಮಾಜ ಸೇವೆಗಳನ್ನು ನಡೆಸುತ್ತಾ ಬಂದಿದೆ. ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ಎಸ್ ಎಸ್ ಎಫ್ ನ ಕಾರ್ಯಕರ್ತರು ಭಾಗಿಯಾಗಿಲ್ಲ ಎಂಬುವುದು ಎಸ್ ಎಸ್ ಎಫ್ ಸಂಘಟನೆಯ ಅಭಿಮಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಮೆಡಿಕಲ್ ಕಾಲೇಜು ಮಡಿಕೇರಿ ಇದರ ಮುಖ್ಯ ವೈದ್ಯಾಧಿಕಾರಿ ಡಾ: ಕರುಂಬಯ್ಯ, ವೈದ್ಯಕೀಯ ಸಿಬ್ಬಂದಿಗಳು, ಸಿದ್ದಾಪುರ ಪೋಲಿಸ್ ಸಿಬ್ಬಂದಿ ಶಿವಕುಮಾರ್,  ಎಸ್ ವೈ ಎಸ್ ನಾಯಕರಾದ ರಶಾದ್, ಎಸ್ ಎಸ್ ಎಫ್ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ನೆಲ್ಲಿಹುದಿಕೇರಿ, ಶಾಫಿ ಸಅದಿ ಸೋಮವಾರಪೇಟೆ, ರಹೀಂ ಹೊಸತೋಟ ಹಾಗು ಹಲವು ನಾಯಕರು ಭಾಗವಹಿಸಿದ್ದರು.

Report : Shibili Kalkandoor





No comments

Post a Comment