ನಾಪೋಕ್ಲು ವ್ಯಾಪ್ತಿಯಲ್ಲಿ ಮತ್ತೆ ಆರಂಭವಾದ ಅಕ್ರಮ ಮರಳುಗಾರಿಕೆ

No comments

   ನಾಪೋಕ್ಲು (Times Of Coorg) : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೆ ಅಕ್ರಮ ಮರಳು ದಂಧೆ ಪ್ರಾರಂಭವಾಗಿದೆ. ಇದರಿಂದ ಸರಕಾರದಿಂದ ಗುತ್ತಿಗೆ ಪಡೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಾರಣ ಸರ್ಕಾರದಿಂದ 5 ವರ್ಷಕ್ಕೆ ಮರಳುಗಾರಿಕೆಗೆ ಗುತ್ತಿಗೆ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರ ಈ ಅಕ್ರಮ ಮರಳು ಕಳ್ಳರ ಉಪಟಳದಿಂದ  ಕಳೆದ 2 ವರ್ಷಗಳಿಂದ ಈ ಅಕ್ರಮ ಮರಳು ಕಳ್ಳರ ಕಾಟದಿಂದ ಮರಳಿನ ಕೊರತೆಯಿಂದ ಸರಕಾರ  ನಿಗದಿತ ಪಡಿಸಿದ ಪ್ರಮಾಣದ ಮರಳು ತೆಗೆಯಲು ಸಾಧ್ಯವಾಗದೆ ಈಗಾಗಲೇ  ಸುಮಾರು 40ರಿಂದ 50 ಲಕ್ಷ ನಷ್ಟ ಅನುಭವಿಸಿದ್ದು ಅದೇ ರೀತಿ ಸರ್ಕಾರದ ಬೊಕ್ಕಸಕ್ಕೂ ನಷ್ಟವುಂಟಾಗಿದೆ .

ಇದಕ್ಕೆಲ್ಲಾ ಕಾರಣ ಅಕ್ರಮ ಮರಳು ಕಳ್ಳರು ಮತ್ತು ಸ್ಥಳೀಯ ಅಧಿಕಾರಿಗಳು ಎನ್ನುತ್ತಾರೆ ಗುತ್ತಿಗೆದಾರ ಕಾರಣ ಮಳೆಗಾಲ  ಮುಗಿಯುತ್ತಿದ್ದಂತೆ ಸ್ಥಳೀಯ ಕೆಲ ಮರಳು ಕಳ್ಳರು  ಗುತ್ತಿಗೆದಾರರಿಗೆ ಸರಕಾರ ಮರಳುಗಾರಿಕೆ ಪ್ರಾರಂಭಿಸಲು ಅನುಮತಿ ನೀಡುವ ಮೊದಲೇ ಬಹುತೇಕ ಮರಳನ್ನು ಕದ್ದು ರಾಜಾರೋಷವಾಗಿ ಸಾಗಾಟ ಮಾಡಿ ಮುಗಿಸಿರುತ್ತಾರೆ.

ಪ್ರತಿವರ್ಷ ಗುತ್ತಿಗೆದಾರ 1 ಕೋಟಿಗೂ ಹೆಚ್ಚು ಹಣವನ್ನು ಸರಕಾರಕ್ಕೆ ಪಾವತಿಸಬೇಕಾಗಿದೆ. ಕೋಟ್ಯಾನು'ಗಟ್ಟಲೆ ಬಂಡವಾಳ ಹಾಕಿ ಸರ್ಕಾರದಿಂದ ಟೆಂಡರು ಕರೆದ ನಮಗೆ ಅಕ್ರಮ ಮರಳು ದಂಧೆಕೋರರು ಪಂಗನಾಮ ಹಾಕುತ್ತಿದ್ದಾರೆ ಎಂದು ಗುತ್ತಿಗೆದಾರ ಅಳಲು ತೋಡಿಕೊಂಡಿದ್ದಾರೆ. ನಿರಂತರ ಮಳೆಯಿಂದ ರಸ್ತೆಯಲ್ಲೆಲ್ಲ ನೀರು ನಿಂತು ಹದಗೆಟ್ಟಿದ್ದು ಈ ಸಂದರ್ಭದಲ್ಲಿ ವಾಹನ ಸಂಚರಿಸುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಮತ್ತೊಂದು ಕಡೆ ಅಕ್ರಮ ದಂಧೆಕೋರರನ್ನು ನಿಯಂತ್ರಿಸುವವರು ಯಾರು ಎಂದು ಗುತ್ತಿಗೆದಾರರ ಮತ್ತು  ಸ್ಥಳೀಯರ ಪ್ರಶ್ನೆ.

ಏನೇ ಆದರೂ ನಾಪೋಕ್ಲು ಪೊಲೀಸ್ ಠಾಣೆಗೆ ಇತ್ತೀಚೆಗೆ  ನೇಮಕಗೊಂಡ ಅಂತಹ  ನೂತನ ಠಾಣಾಧಿಕಾರಿ ಈ ಬಗ್ಗೆ ಗಮನಹರಿಸಿ  ಅಕ್ರಮ ದಂಧೆಕೋರರ ಜೊತೆ ಕೈಜೋಡಿಸುವ ಸಿಬ್ಬಂದಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಂಡು ಅಕ್ರಮಮರಳುಗಳ್ಳರನ್ನು ನಿಯಂತ್ರಿಸಿ ಸರಕಾರಕ್ಕೆ ಹಾಗೂ ಗುತ್ತಿಗೆದಾರನಿಗೆ ಆಗುವಂತಹ ನಷ್ಟವನ್ನು ತಡೆಯಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.




No comments

Post a Comment