ಎ.ಕೆ ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ ವತಿಯಿಂದ ಎ.ಕೆ ಸುಬ್ಬಯ್ಯ ಪುಣ್ಯ ಸ್ಮರಣೆ ಕಾರ್ಯಕ್ರಮ

No comments

   ವರದಿ :  ಹಾರಿಸ್ ನಾಪೋಕ್ಲು
 ನಾಪೋಕ್ಲು  (Times Of Coorg): ಮಾಜಿ ಶಾಸಕ ಮತ್ತು ಹಿರಿಯ ನ್ಯಾಯವಾದಿಗಳಾದ ದಿವಂಗತ ಎ. ಕೆ ಸುಬ್ಬಯ್ಯನವರ ಮೊದಲ ವರ್ಷದ ಪುಣ್ಯಸ್ಮರಣಾ ದಿನದ ಪ್ರಯುಕ್ತ ನಾಪೋಕ್ಲುವಿನ ಕೊಡವ ಸಮಾಜ ಸಭಾಂಗಣದಲ್ಲಿ  ಇಂದು ಎ. ಕೆ ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಸಂತ್ರಸ್ತರಿಗೆ  ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಮೊದಲನೆಯದಾಗಿ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲರಿಗೂ ಸ್ಥಳೀಯ IYC ಮತ್ತು NSUI ಯುವಕರು ಸ್ಯಾನಿಟೈಸರ್ ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಕೆ ಮಂಜುನಾಥ್ ಕುಮಾರ್ ನೆರವೇರಿಸಿದರು

ಕಾರ್ಯಕ್ರಮವನ್ನು ಉದ್ದೇಶಿಶಿ  ಕಾರ್ಯಕ್ರಮದ ಕೇಂದ್ರಬಿಂದು ಹಾಗೂ ಎ. ಕೆ ಸುಬ್ಬಯ್ಯ ಪೊನ್ನಮ್ಮ ಟ್ರಸ್ಟನ ವ್ಯವಸ್ತಾಪಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು KPCC ಕಾನೂನು ಮಾನವ ಹಕ್ಕು ಮತ್ತು RTI ಘಟಕದ ಅಧ್ಯಕ್ಷರಾಗಿರುವ ಎ. ಎಸ್ ಪೊನ್ನಣ್ಣ ಮಾತನಾಡಿ ಸಮಾಜದಲ್ಲಿ ಯಾರನ್ನು ಭಯಪಡುವಂತಹ ಅವಶ್ಯಕತೆ ಇಲ್ಲ ಎಂತಾ ಸಮಯದಲ್ಲೂ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿ ಅಲ್ಲಿ ಸೇರಿದ ಎಲ್ಲರಿಗೂ ಧೈರ್ಯವನ್ನು ತುಂಬಿದರು.

ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಪಕ್ಷದ ನಾಯಕರು ಮೊದಲೇ  ಅರ್ಹರನ್ನು ಗುರುತಿಸಿ ಟೋಕನ್ ನೀಡಿದ   650 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು .

ಈ ಕಾರ್ಯಕ್ರವನ್ನು ಉದ್ದೇಶಿಸಿ  DCC ಅಧ್ಯಕ್ಷರಾದ ಮಂಜುನಾಥ್ ಕುಮಾರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ   ಕೆ ಎ ಇಸ್ಮಾಹಿಲ್, ಕೊಡಗು ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ನೆರವಂಡ ಉಮೇಶ್, ಹಿರಿಯರಾದ ಸೋಮಪ್ಪ ಮಾತಾನಾಡಿದರು

 ಹೆಚ್. ಎ ಹಂಝ DCC ಸದಸ್ಯರು
ಎಂ. ಹೆಚ್ ಅಬ್ದುಲ್ ರಹಿಮಾನ್ ಮಾಜಿ ಅಧ್ಯಕ್ಷರು ಕೊಡಗು ಜಿಲ್ಲಾ ವಕ್ಫ್ ಬೋರ್ಡ್, ಹನೀಫ್ ಎಸ್. ಪಿ
ಅಧ್ಯಕ್ಷರು ಕೊಡಗು ಜಿಲ್ಲಾ ಯುವ ಕಾಂಗ್ರೆಸ್, ಸುದೈ ನಾಣಯ್ಯ ಅಧ್ಯಕ್ಷರು ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್,
ಕುಶು ಕುಶಾಲಪ್ಪ ಅಧ್ಯಕ್ಷರು ನಾಪೋಕ್ಲು ವಲಯ ಕಾಂಗ್ರೆಸ್, ಎ. ಕೆ ಹಾರಿಸ್ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕ, ಸೂರಜ್ ಹೊಸೂರ್ ಅಧ್ಯಕ್ಷರು ಸಾಮಾಜಿಕ ಜಾಲತಾಣ ಕೊಡಗು ಜಿಲ್ಲಾ ಕಾಂಗ್ರೆಸ ಸುರಯ್ಯ ಅಬ್ರಾರ್ ಅದ್ಯಕ್ಷರು ಕೊಡಗು ಜಿಲ್ಲಾ ಮಹಿಳಾ ಘಟಕ, ರಾಜೇಶ್ವರಿ ಅಧ್ಯಕ್ಷರು ನಾಪೋಕ್ಲು ವಲಯ ಕಾಂಗ್ರೆಸ್ ಮಹಿಳಾ ಘಟಕ,ಪ್ರಮುಖರಾದ ಲವ ಚಿಣ್ಣಪ್ಪ ,ಬಶೀರ್ ಚೇರಂಬಾಣೆ, ಬೇಕಲ್ ರಮಾನಾಥ್, ಸಿರಾಜ್ ಪರವಂಡ, ಹಿರಿಯ ಕಾಂಗ್ರೆಸಿಗರು, ಹಾಜರಿದ್ದರು.

ಅರುಣ್ ಬೇಬ  ಸ್ವಾಗತಿಸಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬೇಕಲ್ ರಮಾನಾಥ್ ನಿರೂಪಿಸಿ, ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕುಶು ಕುಶಾಲಪ್ಪ ವಂದಿಸಿದರು.




No comments

Post a Comment