ಕೊಡಗು ಜಿಲ್ಲೆಯಲ್ಲಿ ಇಂದು 53 ಮಂದಿಗೆ ಕೊರೋನಾ ಪಾಸಿಟಿವ್ /28 / AUGUST / 2020 / ಶುಕ್ರವಾರ

No comments

      ಮಡಿಕೇರಿ (Times Of Coorg) ):-ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 21 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 32 ಸೇರಿದಂತೆ ಒಟ್ಟು 53 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

     ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿಯ ಕುಂದಚೇರಿ ಗ್ರಾಮದ ಚೆಟ್ಟಿಮಾನಿಯ ಪಂಚಾಯತ್ ಕಚೇರಿ ಬಳಿಯ 19 ವರ್ಷದ ಮಹಿಳೆ, 6 ವರ್ಷದ ಬಾಲಕ ಮತ್ತು 30 ವರ್ಷದ ಪುರುಷ. ಮಡಿಕೇರಿ ಹಾಕತ್ತೂರು ಗ್ರಾಮದ ಹರತಾಳ ರಸ್ತೆಯ 73 ವರ್ಷದ ಪುರುಷ. ಮಡಿಕೇರಿ ಹಾಕತ್ತೂರು ಗ್ರಾಮದ ತೊಂಬತ್ತುಮನೆಯ 16, 9 ವರ್ಷದ ಬಾಲಕರು, 6 ವರ್ಷದ ಬಾಲಕಿ, 13 ವರ್ಷದ ಬಾಲಕ, 73, 41 ಮತ್ತು 34 ವರ್ಷದ ಮಹಿಳೆಯರು. ಮೂರ್ನಾಡು ಅಂಚೆಯ ಕಾಂತೂರು ಗ್ರಾಮದ 53 ವರ್ಷದ ಮಹಿಳೆ. ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಶ್ರೀದೇವಿ ಲೇಔಟಿನ 22 ಮತ್ತು 65 ವರ್ಷದ ಮಹಿಳೆಯರು. ಮಡಿಕೇರಿ ಹಾಕತ್ತೂರಿನ ಚೂರಿಕಾಡುವಿನ 46 ವರ್ಷದ ಪುರುಷ. ಕುಶಾಲನಗರ ಮಾರ್ಕೆಟ್ ರಸ್ತೆಯ 34 ವರ್ಷದ ಮಹಿಳೆ. ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 70 ಮತ್ತು 35 ವರ್ಷದ ಪುರುಷರು. ಮಡಿಕೇರಿ ಅಶೋಕಪುರಂನ ಬ್ಲಾಕ್ ನಂಬರ್ 19ರ 45 ವರ್ಷದ ಪುರುಷ. ಹಾಸನದ ಅರಕಲಗೂಡುವಿನ 55 ವರ್ಷದ ಪುರುಷ. ಗೋಣಿಕೊಪ್ಪ ಸೀಗೆತೋಡುವಿನ 33 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

      ಕುಶಾಲನಗರ ಗುಮ್ಮನಕೊಲ್ಲಿಯ 27 ವರ್ಷದ ಪುರುಷ. ಸೋಮವಾರಪೇಟೆ ಹಾನಗಲ್ ಅಂಚೆಯ ಕಲ್ಕಂದೂರಿನ 53 ವರ್ಷದ ಪುರುಷ. ಸೋಮವಾರಪೇಟೆ ತೋಳೂರುಶೆಟ್ಟಳ್ಳಿಯ ದೊಡ್ಡಮನೆ ಕೊಪ್ಪದ 47 ವರ್ಷದ ಮಹಿಳೆ. ಮಡಿಕೇರಿ ರಿಮಾಂಡ್ ಹೋಮ್ ಬಳಿಯ 53 ವರ್ಷದ ಮಹಿಳೆ. ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 55 ವರ್ಷದ ಮಹಿಳೆ.      ಸೋಮವಾರಪೇಟೆ 7ನೇ ಹೊಸಕೋಟೆ ಜಂಕ್ಷನ್ನಿನ 67 ವರ್ಷದ ಪುರುಷ. ನೆಲ್ಲಿಹುದಿಕೇರಿಯ ಬರಡಿ ಗ್ರಾಮದ 67 ವರ್ಷದ ಪುರುಷ. 

     ಮಡಿಕೇರಿ ಕೂಟುಹೊಳೆ 1ನೇ ಮೊಣ್ಣಂಗೇರಿಯ 69 ವರ್ಷದ ಪುರುಷ. ಮಡಿಕೇರಿ ಪೋಲೀಸ್ ವಸತಿ ಗೃಹದ 35 ವರ್ಷದ ಪುರುಷ.  ಮಡಿಕೇರಿ ಇಗ್ಗುತಪ್ಪ ಬಡಾವಣೆಯ 45 ವರ್ಷದ ಪುರುಷ. ಮಡಿಕೇರಿಯ ಮೈತ್ರಿ ಹಾಲ್ ವಸತಿಗೃಹ ಬಳಿಯ 36 ವರ್ಷದ ಪುರುಷ.

     ಪೊನ್ನಂಪೇಟೆ ಕಿರುಗೂರು ಅಂಚೆಯ 41 ವರ್ಷದ ಪುರುಷ. ಗೋಣಿಕೊಪ್ಪ ಅರವತ್ತೊಕ್ಲುವಿನ ಪಿ.ಎಚ್.ಸಿ ಕಾಲೋನಿಯ 49 ವರ್ಷದ ಪುರುಷ. ವಿರಾಜಪೇಟೆ ಐಮಂಗಲದ 17 ವರ್ಷದ ಬಾಲಕಿ, 53 ವರ್ಷದ ಮಹಿಳೆ ಮತ್ತು 58 ವರ್ಷದ ಪುರುಷ.   

      ವಿರಾಜಪೇಟೆ ನೆಹರೂ ನಗರ ಮಸೀದಿ ಬಳಿಯ 22 ವರ್ಷದ ಮಹಿಳೆ. ಗೋಣಿಕೊಪ್ಪ ನೇತಾಜಿ ಲೇಔಟಿನ 41 ವರ್ಷದ ಪುರುಷ. ಕುಶಾಲನಗರ ಮುಳ್ಳುಸೋಗೆಯ ಸರ್ಕಾರಿ ಶಾಲೆ ಎದುರಿನ 25 ವರ್ಷದ ಮಹಿಳೆ. ವಿರಾಜಪೇಟೆ ಕಾಕೋಟುಪರಂಬು ಅಂಚೆಯ ನಾಲ್ಕೇರಿ ಗ್ರಾಮದ 42 ವರ್ಷದ ಪುರುಷ. ವಿರಾಜಪೇಟೆ ನೆಹರೂ ನಗರದ 28 ಮತ್ತು 30 ವರ್ಷದ ಮಹಿಳೆಯರು.       ವಿರಾಜಪೇಟೆ ಕಾವಡಿ ಗ್ರಾಮ ಮತ್ತು ಅಂಚೆಯ 26 ವರ್ಷದ ಮಹಿಳೆ. ಪೊನ್ನಂಪೇಟೆ ಕಾವೇರಿ ನಗರದ 48 ವರ್ಷದ ಪುರುಷ. ವಿರಾಜಪೇಟೆ ಧನುಗಾಲ ಅಂಚೆಯ ಕೋಣನ ಕಟ್ಟೆಯ 26 ವರ್ಷದ ಪುರುಷ. ಗೋಣಿಕೊಪ್ಪ ಕುಂದ ರಸ್ತೆಯ 26 ವರ್ಷದ ಪುರುಷ. ಕುಶಾಲನಗರ ಬೈಚನಹಳ್ಳಿಯ ಜಾತ್ರಾ ಮೈದಾನ ಬಳಿಯ 55 ವರ್ಷದ ಮಹಿಳೆ.

      ಸೋಮವಾರಪೇಟೆ ಶಿರಂಗಾಲದ ಕಾಡ ಬಸವೇಶ್ವರ ದೇವಾಲಯ ಬಳಿಯ 59 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ನೀರುಕೊಲ್ಲಿಯ ಸಿದ್ದಪ್ಪಾಜಿ ದೇವಾಲಯ ಬಳಿಯ 28 ವರ್ಷದ ಪುರುಷ, 44 ವರ್ಷದ ಮಹಿಳೆ ಮತ್ತು 48 ವರ್ಷದ ಪುರುಷ. ಪೊನ್ನಂಪೇಟೆ ಪೋಲೀಸ್ ವಸತಿ ಗೃಹದ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

      ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1342 ಆಗಿದ್ದು, 1074 ಮಂದಿ ಗುಣಮುಖರಾಗಿದ್ದಾರೆ. 250 ಸಕ್ರಿಯ ಪ್ರಕರಣಗಳಿದ್ದು, 18 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 220 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment