ನಾಪೋಕ್ಲು : ಮಳೆಯ ಹಬ್ಬರ ತಗ್ಗಿದರೂ ಏರುತ್ತಲೇ ಇರುವ ಪ್ರವಾಹ

No comments

ವರದಿ,:  ಹಾರಿಸ್ ನಾಪೋಕ್ಲು
 ನಾಪೋಕ್ಲು (Times Of Coorg) : ನಾಪೋಕ್ಲು ವ್ಯಾಪ್ತಿಯಲ್ಲಿ ವರುಣನ ಅಬ್ಬರ ಸ್ವಲ್ಪ ಮಟ್ಟಿಗೆ ತಗ್ಗಿದ್ದರೂ ಸಮೀಪದ ಚರಿಯ ಪರಂಬು ಗ್ರಾಮದಲ್ಲಿ ಏರುತ್ತಲೇ ಇರುವ ಪ್ರವಾಹ ಚೇರಿಯ ಪರಂಬು ದರ್ಗಾ ಶರೀಫ್ ಶಾದಿ ಮಾಲ್ ಮುಳುಗುವ ಬೀತಿಯಲ್ಲಿದೆ.

ಇದರಿಂದ  ಚರಿಯ ಪರಂಬು ಪೈಸಾರಿ ನಿವಾಸಿಗಳು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದು
ಇದೀಗ ಈ ಗ್ರಾಮದ ಸುತ್ತಮುತ್ತಲಿನ ನಿವಾಸಿಗಳು ಕಳೆದ ವರ್ಷದ ಹಾಗೆ ಪ್ರವಾಹ ಆವರಿಸಬಹುದು ಎಂದು  ಆತಂಕಗೊಂಡಿದ್ದಾರೆ. ಪ್ರವಾಹ ಭಯದಿಂದ ಈಗಾಗಲೇ ಇಲ್ಲಿನ ಬಹುತೇಕ ಕುಟುಂಬಗಳು ಸುರಕ್ಷಿತ ಸ್ಥಳದಲ್ಲಿ ಇರುವ   ತಮ್ಮ ತಮ್ಮ ಸಂಬಂಧಿಕರು ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದುಕೊಂಡಿರುತ್ತಾರೆ.





No comments

Post a Comment