ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಆಭಿಮಾನಿಗಳ ಸಂಘ ಸದಸ್ಯರು ಅಪಪ್ರಚಾರಗಳಿಗೆ ಕಿವಿಗೂಡದಂತೆ ಜಿಲ್ಲಾ ಅಧ್ಯಕ್ಷ ನವೀದ್ ಖಾನ್ ಮನವಿ
ನನ್ನ ಹೆಸರು ಬಳಸಿಕೊಂಡು ಅಭಿಮಾನಗಳ ಸಂಘ, ಟ್ರಸ್ಟ್, ಸಂಘಟನೆಗಳನ್ನಕ ಕಟ್ಟಿಕೊಳ್ಳುವಂತಿಲ್ಲ : ಡಿ.ಕೆ ಶಿವಕುಮಾರ್ ಹೇಳಿಕೆ
ಕೊಡ್ಲಿಪೇಟೆ (Times Of Coorg) : ನನ್ನ ಹೆಸರು ಬಳಸಿಕೊಂಡು ಯಾರೂ ಕೂಡ ಅಭಿಮಾನಿಗಳ ಸಂಘ, ಟ್ರಸ್ಟ್, ಮತ್ತಿತರ ಸಂಘಟನೆಗಳನ್ನು ಮಾಡಿಕೊಳ್ಳುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಎಂ ಎಸ್ ಅಂಗಡಿ ನೇತೃತ್ವದ ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ್ ಅಭಿಮಾನಿಗಳ ಸಂಘವನ್ನು ಹೊರತುಪಡಿಸಿ ನನ್ನ ಹೆಸರಿನ ಅಭಿಮಾನಿ ಸಂಘ, ಸಂಸ್ಧೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಬೇಕು.
ಒಂದೊಮ್ಮೆ ಯಾರಾದರೂ ನನ್ನ ಹಾಗೂ ನನ್ನ ಸಹೋದರ ಡಿ ಕೆ ಸುರೇಶ್ ಹೆಸರಿನ ಸಂಘ ಸಂಸ್ಥೆಗಳ ಮೂಲಕ ಚಟುವಟಿಕೆ ನಡೆಸಿದರೆ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿ.ಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಎಂ.ಎಸ್.ಅಂಗಡಿ ನೇತ್ರತ್ವದ ಡಿ.ಕೆ.ಶಿವಕುಮಾರ್ ಆಭಿಮಾನಿಗಳ ಸಂಘವು ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿದ್ದು
ಇದರಿಂದ ಆಭಿಮಾನಿ ಸಂಘದ ಸದಸ್ಯರುಗಳು ಯಾವುದೇ ಗೊಂದಲಕ್ಕೊಳಗಾಗಬಾರದು.
ಆಭಿಮಾನಿಗಳು ಅಪಪ್ರಚಾರಗಳಿಗೆ ಕಿವಿಕೊಡದೆ ಸಮಾಜಿಕ ಚಟುವಟಿಕೆ ಗಳಿಗೆ ನಮ್ನ ಸಂಘದೊಂದಿಗೆ ಹಿಂದಿನಂಥೆ ಬೆಂಬಲವಾಗಿರಬೇಕೆಂದು ಕೋರುತ್ತೇನೆ ಎಂದು ನವೀದ್ ಖಾನ್ ಅದ್ಯಕ್ಷರು ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಆಭಿಮಾನಿಗಳ ಸಂಘ ಕೊಡಗು ಜಿಲ್ಲೆ ಕೋರಿದ್ದಾರೆ.

No comments
Post a Comment