ಕೊಡಗು ಜಿಲ್ಲೆಯಲ್ಲಿ ಇಂದು 19 ಮಂದಿಗೆ ಕೊರೋನಾ ಪಾಸಿಟಿವ್ / 25 ಆಗಸ್ಟ್ 2020 ಮಂಗಳವಾರ

No comments

       ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 12 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 7 ಸೇರಿದಂತೆ ಒಟ್ಟು 19 ಕೋವಿಡ್ ಹೊಸ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

       ಕುಶಾಲನಗರ ಡ್ರೀಮ್ ಲೇಔಟಿನ ನಿಸರ್ಗಧಾಮ ಬಳಿಯ 30 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಶ್ರೀಮಂಗಲದ ಕೃಷ್ಣ ದೇವಾಲಯ ಬಳಿಯ 19 ಮತ್ತು 49 ವರ್ಷದ ಪುರುಷರು. ವಿರಾಜಪೇಟೆ ಶ್ರೀಮಂಗಲದ 76 ವರ್ಷದ ಮಹಿಳೆ. ಮಡಿಕೇರಿ ಎಮ್ಮೆಮಾಡುವಿನ ಪಡಿಯಣಿ ಮಸೀದಿ ಬಳಿಯ 58 ವರ್ಷದ ಪುರುಷ. ಕುಶಾಲನಗರ ಸೋಮೇಶ್ವರ ಬಡಾವಣೆಯ 45, 24 ಮತ್ತು 25 ವರ್ಷದ ಮಹಿಳೆಯರು. ಕುಶಾಲನಗರ ಬಸಪ್ಪ ಲೇಔಟಿನ 8 ವರ್ಷದ ಬಾಲಕಿ. ಕುಶಾಲನಗರ ಮುಳ್ಳುಸೋಗೆಯ ಶಕ್ತಿ ಬಡಾವಣೆಯ 41 ವರ್ಷದ ಪುರುಷ. ಕುಶಾಲನಗರ ಮುಳ್ಳುಸೋಗೆಯ 1ನೇ ಬ್ಲಾಕಿನ 70 ವರ್ಷದ ಮಹಿಳೆ. ಕುಶಾಲನಗರ ನಿಜಾಮುದ್ದೀನ್ ಲೇಔಟಿನ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

       ಮಧ್ಯಾಹ್ನ 2 ಗಂಟೆ ವೇಳೆಗೆ 7 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ವಿರಾಜಪೇಟೆ ವಿ.ಬಾಡಗದ 63 ವರ್ಷದ ಮಹಿಳೆ. ನೆಲ್ಲಿಹುದಿಕೇರಿ ಬದ್ರಿ ರಸ್ತೆಯ ನಲ್ವತ್ತೆಕ್ರೆಯ 36 ವರ್ಷದ ಪುರುಷ. ಸುಂಟಿಕೊಪ್ಪ ಅಂಬೇಡ್ಕರ್ ಬಡಾವಣೆಯ 18 ವರ್ಷದ ಮಹಿಳೆ. ಮಡಿಕೇರಿ ಸುದರ್ಶನ ವೃತ್ತದ ಕೆಇಬಿ ವಸತಿಗೃಹದ 17 ವರ್ಷದ ಬಾಲಕಿ. ವಿರಾಜಪೇಟೆ ಮಲ್ಲಮಟ್ಟಿ ಬಳಿಯ ಮೈತಾಡಿ ಅಂಚೆಯ ಚಾಮಿಯಾಲ ಗ್ರಾಮದ 70 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಹಾಸನ ಜಿಲ್ಲೆಯ ಮಲ್ಲೇನಹಳ್ಳಿಯ 45 ವರ್ಷದ ಮಹಿಳೆ. ಮಡಿಕೇರಿ ಕಾವೇರಿ ಲೇಔಟಿನ 54 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

      ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1239 ಆಗಿದ್ದು, 953 ಮಂದಿ ಗುಣಮುಖರಾಗಿದ್ದಾರೆ. 270 ಸಕ್ರಿಯ ಪ್ರಕರಣಗಳಿದ್ದು, 16 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 257 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment