ಕೊಡಗು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ
"ಭಾರತ ಮಾರಾಟಕ್ಕಿಲ್ಲ" - "ಭಾರತ ಉಳಿಸಿ ಪ್ರತಿಭಟನಾ ಅಭಿಯಾನ"
ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ವೇದಿಕೆಯ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಸರಕಾರಗಳ ಜನ ವಿರೋಧಿ ನೀತಿಗಳನ್ನು ಖಂಡಿಸಿ ಪ್ರಮುಖರು ಮಾತನಾಡಿದರು.
"ನಾವು ಭಾರತೀಯರು" ಎಂಬ ಪ್ರತಿಜ್ಞೆಯೊಂದಿಗೆ ಸಮಾನ ಮನಸ್ಕ ಸಂಘಟನೆಗಳು ದೇಶಾದ್ಯಂತ ಏಕ ಕಾಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕಾರ್ಪೊರೇಟ್ ಕಂಪನಿಗಳನ್ನು ತೊಲಗಿಸಿ, ಭಾರತ ಉಳಿಸಿ, ಕರ್ನಾಟಕ ಭೂ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವುದು, ಕೃಷಿ ತಜ್ಞ ಸ್ವಾಮಿನಾಥನ್ ಆಯೋಗವನ್ನು ಜಾರಿ ಮಾಡುವುದು, ಕೊರೋನಾ ಪೀಡಿತ ಮತ್ತು ಮುನ್ಸೂಚನೆ ಇರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಿ, ಎಲ್ಲಾ ಕುಟುಂಬಗಳಿಗೂ ಆಹಾ, ಔಷಧಿ ನೀಡಬೇಕು, ಮಹಾಮಳೆಯಿಂದಾಗಿ ಪ್ರಕೃತಿ ವಿಕೋಪದಿಂದ ಪ್ರಾಣ ಹಾನಿ, ದನಕರುಗಳು, ಹಾನಿಯಾದಲ್ಲಿ ಮತ್ತು ಮನೆಗಳು ಹಾಗೂ ಭೂ ಕುಸಿತ, ಕೃಷಿ ನಷ್ಟದ ಬಗ್ಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡುವುದರೊಂದಿಗೆ ಮುನ್ನೆಚ್ಚರಿಕೆ ವಹಿಸುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಿ.ಎಫ್.ಐ ಜಿಲ್ಲಾಧ್ಯಕ್ಷ ಅಮೀನ್ ಮುಹಿಸ್ಸಿನ್, ಕರ್ನಾಟಕ ರೈತ ಸಂಘದ ಪ್ರಧಾನಕಾರ್ಯದರ್ಶಿ ನಿರ್ವಾಣಪ್ಪ, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಟಿ.ಎಚ್ ಅಬೂಬಕರ್, ಬಹುಜನ ಕಾರ್ಮಿಕ ಸಂಘದ ಮೊಣ್ಣಪ್ಪ, ಟಿಪ್ಪು ಆರ್ಮಿಯ ರಾಷ್ತ್ರೀಯ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ (ಬೆಂಗಳೂರು), ಕರ್ನಾಟಕ ಅಂಬೇಡ್ಕರ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಕೇಶವ ಮೂರ್ತಿ, ಫೈರೋಜ್ ಖಾನ್, ನಮ್ಮ ಕೊಡಗು ತಂಡದ ಜಿಲ್ಲಾ ಸಂಚಾಲಕ ನೌಷಾದ್ ಜನ್ಮತ್, ಸಿಪಿಐಎಂಎಲ್ ಜಿಲ್ಲಾ ಸಂಚಾಲಕ ಮಂಜುನಾಥ್, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ರಾಜು, ಹೊದ್ದೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕುಸುಮಾ, ಜೈ ಜನ್ಮ ಭೂಮಿಯ ರಾಜ್ಯ ಕಾರ್ಯದರ್ಶಿ ಅಕ್ರಂ ಪಾಷಾ ಪ್ರಮುಖರದ ಮನ್ಸೂರ್, ಸಾಗರ ಹಫೀಜ್, ಉಮ್ಮರ್, ತುಪೈಲ್, ರಿಯಾಜ್ ಸೇರಿದಂತೆ ಮತ್ತಿತರರು ಇದ್ದರು.



No comments
Post a Comment