ಕರಡಿಗೋಡು ಸಮುದಾಯ ಭವನದಲ್ಲಿರುವ ನಿರಾಶ್ರಿತರ ಗಂಟಲ ದ್ರವ ಸಂಗ್ರಹ
ಸಿದ್ಧಾಪುರ (Times Of Coorg) : ಕರಡಿಗೋಡು ಸಮುದಾಯ ಭವನದ ನಿರಾಶ್ರಿತರ ಕೋವಿಡ್-19 ಪರೀಕ್ಷೆ ನಡೆಸಲಾಯಿತು.ಈಗಾಗಲೇ ಈ ಪ್ರದೇಶದಲ್ಲಿ ಪ್ರವಾಹದಿಂದಾಗಿ ಮನೆಗಳು ಜಲಾವೃತಗೊಂಡಿದ್ದು ಇಲ್ಲಿನ ನಿವಾಸಿಗಳು ನಿರಾಶ್ರಿತರ ಸೇವಾಕೇಂದ್ರದಲ್ಲಿ ಆಶ್ರಯ ಪಡೆದಿದ್ದರು .
ಇಂದು ಇಲ್ಲಿಗೆ ಆಗಮಿಸಿದ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ನಿರಾಶ್ರಿತರ ಗಂಟಲ ದ್ರವವನ್ನು ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಸುದರ್ಶನ್ ಆರೋಗ್ಯ ನಿರೀಕ್ಷರು
ಪ್ರದೀಪ್, STLS ಅನೀತ ಕುಮಾರಿ ಕಿರಿಯ ಆರೋಗ್ಯ ಸಹಾಯಕಿ. ಬೇಬಿ ಆಶಾ ಕಾರ್ಯಕರ್ತರು
ಸುಬ್ಬರಾಜ್ ಪ್ರಯೋಗಾಲಯ ತಂತ್ರರು
ಹಾಜರಿದ್ದರು.



No comments
Post a Comment