ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೆ ಎರಡು ಬಲಿ : ಮೃತರ ಸಂಖ್ಯೆ 16ಕ್ಕೆ ಏರಿಕೆ

No comments

ಮಡಿಕೇರಿ (Times Of Coorg): ಕೊಡಗಿನಲ್ಲಿ  ಕೊರೊನಾ ಸೋಂಕಿಗೆ ಮತ್ತೆ ಇಬ್ಬರು ಸಾವಿಗೀಡಾಗಿದ್ದಾರೆ.
ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಹೋಬಳಿ, ಗುಮ್ಮನಕೊಲ್ಲಿಯ ಚೌಡೇಶ್ವರಿ ಬಡಾವಣೆಯ 62 ವರ್ಷದ ಮಹಿಳೆಯೊಬ್ಬರು , ಹಿಂದಿನಿಂದಲೂ ಕ್ಯಾನ್ಸರ್ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು.

ಆಗಸ್ಟ್ 18ರಂದು  ಜ್ವರ ಕಾಣಿಸಿಕೊಂಡಿದ್ದು, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಂಡಿದ್ದರು.  ಆಗ ಕೋವಿಡ್ ಪರೀಕ್ಷೆ ಸಂಬಂಧ ಅವರ ಗಂಟಲು/ಮೂಗು ದ್ರವ ಮಾದರಿಯನ್ನು ಸಂಗ್ರಹಿಸಿ, ಜ್ವರಕ್ಕೆ ಮಾತ್ರೆಗಳನ್ನು ನೀಡಿ ಅವರನ್ನು ಮನೆಗೆ ಕಳುಹಿಸಲಾಗಿತ್ತು.

ಬುಧವಾರ ಅವರಿಗೆ ತೀವ್ರ ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಪುನ:  ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದರು.  ಗುರುವಾರ  ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಇದೇ ದಿನ ಬೆಳಿಗ್ಗೆ 11.30 ಗಂಟೆ ವೇಳೆಗೆ ಇವರು ಮೃತರಾಗಿರುತ್ತಾರೆ.

ವಿರಾಜಪೇಟೆ ತಾಲ್ಲೂಕು, ಶ್ರೀಮಂಗಲ ಗ್ರಾಮದ 65 ವರ್ಷದ ಪುರುಷರೊಬ್ಬರು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಮತ್ತು ಇವರು ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸುತ್ತಿದ್ದರು.

ಇವರಿಗೆ ಆಗಸ್ಟ್ 05 ರಂದು ಜ್ವರ ಕಾಣಿಸಿಕೊಂಡಿದ್ದು, ಆಗಸ್ಟ್ 07  ರಂದು ಗೋಣಿಕೊಪ್ಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು/ಮೂಗು ದ್ರವ ಮಾದರಿಯನ್ನು ತೆಗೆದು ಕೋವಿಡ್ ಪರೀಕ್ಷೆ ನಡೆಸಲಾಗಿ, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ತಕ್ಷಣ ಇವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಗುರುವಾರ  ರಂದು ಇವರಿಗೆ ಡಯಾಲಿಸಿಸ್ ಮಾಡುವ ಸಂದರ್ಭ  ಹೃದಯಾಘಾತವಾಗಿ ರಾತ್ರಿ 10.50 ಕ್ಕೆ ಮೃತರಾಗಿರುತ್ತಾರೆ.
ಮೃತ ದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುವುದು.
ಜಿಲ್ಲಾಧಿಕಾರಿ‌ ತಿಳಿಸಿದ್ದಾರೆ.

No comments

Post a Comment