ಮಡಿಕೇರಿ : ಆಗಸ್ಟ್ 26ರಂದು ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳ ಬಹಿರಂಗ ಹರಾಜು
ಚಿತ್ರ : ಸಾಂಧರ್ಬಿಕ
ಮಡಿಕೇರಿ (Times Of Coorg):-ತೆರಿಗೆಯನ್ನು ಪಾವತಿಸದೆ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳನ್ನು, ಈಗಿರುವ ಪ್ರಸ್ತುತ ಸ್ಥಿತಿಯಲ್ಲಿಯೇ ಆಗಸ್ಟ್, 26 ರ ಮಧ್ಯಾಹ್ನ 3 ಗಂಟೆಗೆ, ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಹರಾಜು ಷರತ್ತು ಮತ್ತು ಕೋವಿಡ್-19 ರ ನಿಬಂಧನೆಗೊಳಪಟ್ಟಂತೆ ಬಹಿರಂಗ ಹರಾಜು ಮಾಡಲಾಗುವುದು. ವಾಹನಗಳನ್ನು ನಿಲುಗಡೆಗೊಂಡಿರುವ ಸ್ಥಳದಲ್ಲಿ ಪರಿಶೀಲಿಸಬಹುದಾಗಿದೆ. ಹೆಚ್ಚಿನ ವಿವರವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣಾ ಫಲಕದಲ್ಲಿ ಪಡೆಯಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ.

No comments
Post a Comment