ಕೊಡಗು ಆಕ್ಷನ್ ಟೀಮ್ ವತಿಯಿಂದ ಮಾಸ್ಕ್ ವಿತರಣೆ
ವರದಿ :ಅಜರುದ್ದೀನ್ ವಯಕೋಲ್
ನಾಪೊಕ್ಲು (Times Of Coorg) : ಹೊಸದಾಗಿ ಕೂಡಗು ಜಿಲ್ಲೆಯಲ್ಲಿ ರೂಪುಗೊಂಡ ಕೊಡಗು ಆಕ್ಷನ್ ಟೀಮ್ ಸದಸ್ಯರವತಿಯಿಂದ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರನ್ನು ಭೇಟಿಮಾಡಲಾಯಿತು.
ಜಿಲ್ಲೆಯಲ್ಲಿ ಯಾವುದೇ ಪ್ರಕ್ರತಿ ವಿಕೋಪಗಳು ಮತ್ತು ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದೊಂದೀಗೆ ಕೈ ಜೋಡಿಸಿ ತಮ್ಮ ಸಹಾಯ ಸಹಕಾರ ನೀಡುವ ಭರವಸೆ ನೀಡಿ ಜಿಲ್ಲಾಧಿಕಾರಿಗಳು ಹಾಗೂ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸೊದರೂಂದೀಗೆ ಮಾಸ್ಕ್ ವಿತರಿಸಲಾಯಿತು.
ಮಡಿಕೇರಿ ನಗರ ಠಾಣೆಯ ಸಿಬ್ಬಂದಿಗಳಿಗೂ ಮಹಿಳಾ ಠಾಣಾ ಸಿಬ್ಬಂದಿಗಳಿಗೂ ಈ ಸಮಯದಲ್ಲಿ ಮಾಸ್ಕ್ ವಿತರಿಸಲಾಯಿತು ಮಡಿಕೇರಿ ನಗರದ ಡಿವೈಎಸ್ಪಿಅವರನು ಭೇಟಿ ಮಾಡಿ ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೋಣ ಜಾಗೃತಿ ಹಾಗೂ ವಿಕೋಪಕ್ಕೆ ಸಹಾಯ ಸಹಕಾರ ನೀಡುವ ಭರವಸೆಯೊಂದಿಗೆ ನಮ್ಮ ಒಕ್ಕೂಟವನ್ನು ಪರಿಚಯ ಮಾಡಲಾಯಿತು ಹಾಗೂ ನಾಪೋಕ್ಲು ಪೊಲಿಸ್ ಠಾಣೆಯಲ್ಲಿ ಮತ್ತು ನಾಪೋಕ್ಲು ವಿಭಾಗದ ಉಪ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆಯ ಅದಿಕಾರಿಗಳೀಗು ಮಾಸ್ಕ್ ವಿತರಿಸಿ ಟೀಂ ಕುರಿತು ಪರಿಚಯ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಕೂಡಗು ಆಕ್ಷನ್ ಟೀಂ ಸದಸ್ಯರಾದಸದಸ್ಯರಾದ ಪ್ರತೀಕ್ ಪೊನ್ನಣ್ಣ,ವಸಂತ ,ಸುಧಾಮ ,ರವಿ ಗೌಡ,ಫೈಸಲ್ ಇ ಪಾಯಡತ್, ಮೊಹ್ಸಿನ್,ಸಿದ್ದೀಕ್ ಉಪಸ್ಥಿತರಿದ್ದರು

No comments
Post a Comment