ರಸ್ತೆಯ ಗುಂಡಿ ಮುಚ್ಚಿದ ನಾಪೋಕ್ಲು ಪೊಲೀಸರು
ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ಪಟ್ಟಣದ ಬೇತು ರಸ್ತೆಯಲ್ಲಿ ಹಲವಾರು ಸಮಯಗಳಿಂದ ರಸ್ತೆಯ ಒಂದು ಬದಿಯಲ್ಲಿ ಡಾಂಬರು ಕಳಚಿ ದೊಡ್ಡಗುಂಡಿ ಯಾಗಿದ್ದು. ಗುಂಡಿ ಅರ್ಧ ರಸ್ತೆಯನ್ನೇ ಆವರಿಸಿಕೊಂಡಿತ್ತು
ಇದರಿಂದ ಮೊದಲೇ ಕಿಷ್ಕಿಂಧೆ ಯಿಂದ ಕೂಡಿದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಇದರಿಂದ ವಾಹನ ಸವಾರರಿಗೆ ವಾಹನ ಸೈಡ್ ಕೊಡಲು ಆಗದೆ ಕಿರಿಕಿರಿಯಾಗುತ್ತಿತ್ತು ಇದನ್ನು ಗಮನಿಸಿದ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ದಿವಾಕರ್ ಮತ್ತು ನಾಪೋಕ್ಲು ಠಾಣಾಧಿಕಾರಿ ಆರ್ ಕಿರಣ್ ತಾವೇ ಸ್ವತಹ ವಾಹನದಲ್ಲಿ ಕಲ್ಲು ಮಣ್ಣುಗಳನ್ನು ತರಿಸಿ ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇವರ ಈ ಕಾಳಜಿಗೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು

No comments
Post a Comment